ಶೀಘ್ರದಲ್ಲೇ ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿ: ಶಾಮನೂರು ಶಿವಶಂಕರಪ್ಪ

ದಾವಣಗೆರೆ,ಫೆ.04: ರಾಜ್ಯ ಸರ್ಕಾರ ಶೀಘ್ರದಲ್ಲೇ ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೊಳಿಸಿ ಆ ಮೂಲಕ ರಾಜ್ಯದ 1.43 ಕೋಟಿ ಕುಟುಂಬಗಳ ಆರೋಗ್ಯಕ್ಕೆ ರಕ್ಷಣೆ ಭಾಗ್ಯ ಕಲ್ಪಿಸಲಾಗುವುದು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್‍ನ ಬಾಷಾನಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಆರೋಗ್ಯ ಯೋಜನೆ ಮೂಲಕ ಕೆಲವು ರೋಗಗಳಿಗೆ 1 ತಿಂಗಳು ಕಾಲ ಉಚಿತ ಔಷಧಿಯನ್ನು ವಿತರಿಸುವುದರ ಜೊತೆಗೆ 1.43 ಕೋಟಿ ಕುಟುಂಬಗಳ ಆರೋಗ್ಯ ರಕ್ಷಣೆ ಜವಾಬ್ದಾರಿಯನ್ನು ಸರ್ಕಾರವೇ ವಹಿಸಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಡಾ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ.ಧನಂಜಯ, ಕಾಂಗ್ರೆಸ್ ಮುಖಂಡ ಬಾಟ್ಲಿ ಷೇಕ್ ಅಹ್ಮದ್, ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಇಶ್ರತ್, ಎಸ್ ಡಿಎಂಸಿ ಅಧ್ಯಕ್ಷ ವಲೀಪೀರ್ ಮತ್ತಿತರರು ಮಾತನಾಡಿದರು.
3ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರಾದ ದಿಲ್‍ಶಾದ್ ಷೇಕ್ ಅಹ್ಮದ್, 3ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯ ಕೆ.ಆರ್.ಮಹಿಬೂಬ್ ಸಾಬ್, ಡಾ. ಗುರುಪಾದಪ್ಪ, ಪ್ರಾಂಶುಪಾಲ ಡಾ.ಎನ್.ಬಿ.ಮುರುಗೇಶ್, ದಾದಾಪೀರ್, ಹೆಚ್.ಸಿ.ದಾದಾಪೀರ್, ಅಹ್ಮದ್ ಖಾನ್, ರಹಮತ್ತುಲ್ಲಾ, ಅಪ್ಪು, ಖಾಜಿಸಾಬ್, ಸಿಕಂದರ್, ಶಬ್ಬೀರ್, ರಹೀಂ, ಇಬ್ರಾಹೀಂ ಇನ್ನಿತರರಿದ್ದರು.







