ಸಪ್ನ ಬುಕ್ ಹೌಸ್‌ನಲ್ಲಿ ಶೇ.51ರಷ್ಟು ರಿಯಾಯಿತಿ
.jpg)
ಬೆಂಗಳೂರು, ಫೆ.4: ಸಪ್ನ ಬುಕ್ ಹೌಸ್ ತನ್ನ 51ನೆ ವಾರ್ಷಿಕೋತ್ಸವದ ಪ್ರಯುಕ್ತ ಶೇ.51ರಷ್ಟು ರಿಯಾಯಿತಿ ದರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಮಾರಾಟ ಮಾಡುತ್ತಿದೆ.
ಮುಂದಿನ ಫೆ.11ರವರೆಗೆ ಪುಸ್ತಕ ಪ್ರೇಮಿಗಳು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ. ಇದಲ್ಲದೆ ಪ್ರತಿ 1ಸಾವಿರ ಖರೀದಿಗೆ 50ರು.ಮೌಲ್ಯದ ಗಿಫ್ಟ್ ಕಾರ್ಡ್ ದೊರೆಯಲಿದೆ. ಪ್ರಿವಿಲೇಜ್ ಕಾರ್ಡ್ ಸೌಲಭ್ಯವು ಮುಂದುವರೆಯುತ್ತಿದ್ದು, ಪ್ರತಿ ಬಾರಿ 500ರೂ.ಮೌಲ್ಯದ ಪುಸ್ತಕ ಖರೀದಿ ಮಾಡಿದಾಗ ಶೇ.10ರಿಯಾಯಿತಿ ದೊರೆಯಲಿದೆ.
ಬೆಂಗಳೂರಿನಲ್ಲಿ ಸಪ್ನ ಬುಕ್ ಹೌಸ್ 9ಶಾಖೆ ಹಾಗೂ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ. ಕೊಯಮತ್ತೂರಿನಲ್ಲಿಯೂ 2ಶಾಖೆ ಸೇರಿ 16ಮಳಿಗೆಗಳನ್ನು ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಅಧ್ಯಕ್ಷ ಸುರೇಶ್ ಶಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





