ದರೋಡೆ, ಕೊಲೆಗೆ ಸಂಚು ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮಂಗಳೂರು, ಫೆ.4: ನಗರದ ಫಳ್ನೀರ್ ಬಳಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಶನಿವಾರ ಬಂಧಿತರಾಗಿದ್ದ 4 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳಾದ ತೊಕ್ಕೊಟ್ಟು ಒಳಪೇಟೆಯ ಮನೋಜ್ ಕುಮಾರ್, ಮೊಗವೀರಪಟ್ಣ ಬೀಚ್ ಬಳಿಯ ಪ್ರಸಾದ್ ಯಾನೆ ಪಚ್ಚು, ಮೊಗವೀರಪಟ್ಣ ವ್ಯಾಘ್ರ ಚಾಮುಂಡೇಶ್ವರಿ ದೇವಳದ ಬಳಿಯ ಶ್ರವಣ್, ತೊಕ್ಕೊಟ್ಟು ಭಟ್ನಗರದ ಸುಜಿತ್ ಅವರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಫಳ್ನೀರ್‌ನಲ್ಲಿ ಶನಿವಾರ ಬಂಧಿಸಿದ್ದರು.
ಬಂಧಿತರಿಂದ ತಲವಾರು, ಮಚ್ಚು, ಚೂರಿ, 40 ಗ್ರಾಂ ಗಾಂಜಾ ಮತ್ತು 3 ಮೊಬೈಲ್ ಫೋನ್, ಟಾಟಾ ಸುಮೋ ಕಾರು ಸೇರಿದಂತೆ ಒಟ್ಟು 1,19,000 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿಗಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಪಾಂಡೇಶ್ವರ ಪೊಲೀಸರು ರವಿವಾರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
Next Story





