Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಅನಿವಾಸಿ ಕನ್ನಡಿಗರ ಮಂಗಳೂರು ಫೆಸ್ಟ್ ,...

ಅನಿವಾಸಿ ಕನ್ನಡಿಗರ ಮಂಗಳೂರು ಫೆಸ್ಟ್ , ಕ್ರಿಕೆಟ್ ಕಾರ್ನಿವಾಲ್

ಮಾ.2: ಅಬುಧಾಬಿಯಲ್ಲಿ 'ಮಂಗಳೂರು ಕಪ್ – 2018'

ವಾರ್ತಾಭಾರತಿವಾರ್ತಾಭಾರತಿ4 Feb 2018 11:46 PM IST
share
ಅನಿವಾಸಿ ಕನ್ನಡಿಗರ ಮಂಗಳೂರು ಫೆಸ್ಟ್ , ಕ್ರಿಕೆಟ್ ಕಾರ್ನಿವಾಲ್

ಅಬುಧಾಬಿ, ಫೆ. 4: ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಆರನೇ  ಸೀಸನ್ “ಮಂಗಳೂರು ಕಪ್ 2018”  ಮಾರ್ಚ್  2 ರಂದು ಶೇಖ್ ಝಾಹಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ಕ್ರಿಕೆಟ್ ಪಂದ್ಯಾಟದ ಜೊತೆಗೆ ಮಂಗಳೂರು ಫೆಸ್ಟ್ ಹಮ್ಮಿಕೊಂಡಿದ್ದು, ಮಕ್ಕಳಿಗೆ ಪ್ಲೇ ಕಾರ್ನರ್, ಫೇಸ್ ಪೈನಿಟಿಂಗ್ ಮತ್ತು ಮಹಿಳೆಯರಿಗೆ ಮೆಹೆಂದಿ ಇನ್ನಿತರ  ಕಾರ್ಯಕ್ರಮಗಳನ್ನು ನಡೆಸಲಿದೆ. ಕಳೆದ ನಾಲ್ಕು ಸೀಸನ್ ಗಳಲ್ಲಿ ಶೇಖ್ ಝಾಹಿದ್ ಓವೇಲ್  ಕ್ರೀಡಾಂಗಣದಲ್ಲಿ  ಪಂದ್ಯಾಟ ಜರುಗಿದ್ದು, ಐದನೇ ಸೀಸನ್  ಶೇಖ್ ಝಾಹಿದ್ ಅಂತಾರಾಷ್ಟ್ರೀಯ ಸರಣಿ ನಡೆಯುವ ಮುಖ್ಯ ಮೈದಾನದಲ್ಲಿ ನಡೆದಿತ್ತು. ಈ ಬಾರಿಯ ಆರನೇ ಸೀಸನ್ ಕೂಡ ಅದೇ ಮೈದಾನದಲ್ಲಿ ನಡೆಯಲಿದೆ ಸಂಘಟಕರು ತಿಳಿಸಿದ್ದಾರೆ.

ಪಂದ್ಯಾಟದ ನೇರ ಪ್ರಸಾರ, ವೀಕ್ಷಕರಿಗಾಗಿ ಹತ್ತು ಹಲವು ಆಟಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್ಸ್ ಲಕ್ಕಿಡ್ರಾ, ಜೆಟ್ ಏರ್ ವೇಸ್ ವತಿಯಿಂದ ವೀಕ್ಷಕರಿಗೆ ಉಚಿತ ಟಿಕೆಟ್ ಲಕ್ಕಿ ಡ್ರಾ, ಉಚಿತ ಅರೋಗ್ಯ ತಪಾಸಣೆ, ಹತ್ತು ಹಲವು ಉಚಿತ  ಪ್ರಾಡಕ್ಟ್ ಗಳ  ವಿತರಣೆ, ಊಟದ ವ್ಯವಸ್ಥೆ ಇರುವುದರಿಂದ ಐದು ಸಾವಿರಕ್ಕೂ ಮಿಕ್ಕ ವೀಕ್ಷಕರನ್ನು ಹೊಂದುವ ನೀರಿಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ.

ಪೈಪೋಟಿಯುತ ಹಣಾಹಣಿ ನಿರೀಕ್ಷಿತ ಪಂದ್ಯಾವಳಿಯಲ್ಲಿ  ಹಾರ್ಡ್ ಟೆನಿಸ್ – MRI ಚೆಂಡು ಬಳಕೆಯಾಗಲಿದ್ದು, ಪಂದ್ಯವು ನಿರ್ದಿಷ್ಟ ಆರು ಓವರ್ ಗಳಿಗೆ ಸೀಮಿತವಾಗಿದೆ. ಪ್ರವಾಸಿ ಭಾರತೀಯ ತಂಡಗಳಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ ಭಾರತೀಯ ಕ್ರಿಕೆಟಿಗರನ್ನು ಮಾತ್ರ  ಹೊಂದಿರಬೇಕೆಂಬ ನಿಬಂಧನೆ ಇರುವುದಾಗಿ ಸಂಘಟಕರು ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಮಂಗಳೂರು ಕಪ್ – ಮೈಲಿಗಲ್ಲುಗಳು ಎಂಬ ಕಿರುಹೊತ್ತಿಗೆಯನ್ನೂ ಸಂಘಟಕರು ಪ್ರಕಾಶನ ಮಾಡಲಿದ್ದಾರೆ. ಕಳೆದ ಬಾರಿ 28 ಯುಎಇ ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟ್ ಗಳಿಂದ ಆಗಮಿಸಿದ ತಂಡಗಳು ಕದನ ಕುತೂಹಲ ಕೆರಳಿಸಿತ್ತು.

2013 ರ ಫೈನಲ್ ಹಣಾಹಣಿಯಲ್ಲಿ ಸುರತ್ಕಲ್ ಸ್ಟಾರ್ ಟ್ರೋಫಿಯನ್ನು ತನ್ನ ಬಗಲಿಗೆ ಹಾಕಿಕೊಂಡರೆ, ನಫೀಸ್ ದುಬೈ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 

2014 ರ ಫೈನಲ್ ನಲ್ಲಿ  ಯಂಗ್ ಇಂಡಿಯನ್ಸ್ ಮತ್ತು ಸಿತಾರ ಕ್ರಿಕೆಟರ್ಸ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿತ್ತು. 2015 ರ ಜಿದ್ದಾ ಜಿದ್ದಿನ ಹೋರಾಟದಲ್ಲಿ ಸುರತ್ಕಲ್ ಸ್ಟಾರ್ಸ್ ವಿಜಯ ದುಂಭಿ ಮೊಳಗಿಸಿದರೆ ಆಕ್ಸ್ಫರ್ಡ್ ಮರೀನ್ತಂಡ ರನ್ನರ್ ಅಪ್ ಆಗಿ ಮೂಡಿಬಂದಿತ್ತು. 2016 ರ ರೋಚಕ ಫೈನಲ್ ನಲ್ಲಿ ಫ್ರೈಡೆ ಚಾರ್ಜರ್ಸ್ ತಂಡ ಮತ್ತು ಆಕ್ಸ್ಫರ್ಡ್ ಮರೀನ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿ ಜಯಭೇರಿ ಬಾರಿಸಿತ್ತು.

2017ರ ಅಂತಿಮ ಹಣಾಹಣಿಯಲ್ಲಿ  ಫ್ರೈಡೆ ಚಾರ್ಜರ್ಸ್ ತಂಡ ವನ್ನು ಮಣಿಸಿ ಸಂಟೆಕ್ ತಂಡ ಅಂತಿಮ ಗೆಲುವಿನ ನಗೆ ಬೀರಿತ್ತು. ಈ ಬಾರಿ  ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ : ಪ್ರಥಮ ಸ್ಥಾನ –  ಟ್ರೋಫಿ ಮತ್ತು 11000/ -AED ಮೊತ್ತ, ರನ್ನರ್ ಅಪ್ – ಟ್ರೋಫಿ ಮತ್ತು 6000/ -AED ಮೊತ್ತ, ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗು ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಲೀಗ್ ಹಂತದ ಪ್ರತೀ ಪಂದ್ಯಗಳಲ್ಲಿ ಕೂಡ ಪಂದ್ಯ ಪುರುಷೋತ್ತಮ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ವೀಕ್ಷಕರಿಗೆ ಮತ್ತು ಆಟಗಾರರಿಗೆ ಹತ್ತು ಹಲವು ಆಕರ್ಷಕ ಬಹುಮಾನಗಳನ್ನೂ ಪಡೆಯುವ ಸದಾವಕಾಶವಿದೆ. ಈ ಪಂದ್ಯಾವಳಿಯ ಉದ್ಘಾಟನಾ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ. 

ಅನಿವಾಸಿ ಕನ್ನಡಿಗರಲ್ಲಿ ಕ್ರೀಡಾಪ್ರೇಮವನ್ನು ಹುರಿದುಂಬಿಸುವ ಸಲುವಾಗಿ ಹುಟ್ಟಿಕೊಂಡ ಮಂಗಳೂರು ಕ್ರಿಕೆಟ್ ಕ್ಲಬ್ ವರ್ಷಂಪ್ರತಿ ಈ ಪಂದ್ಯಾವಳಿಯನ್ನು ನಡೆಸಿಕೊಂಡು ಹೋಗುವ ಗುರಿ ಹೊಂದಿದೆ. ತಂಡಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು. ಭಾಗವಹಿಸಲಿಚ್ಚಿಸುವವರು ಅಂತರ್ಜಾಲದ ಮುಖಾಂತರ ಮಂಗಳೂರು ಕ್ರಿಕೆಟ್ ಕ್ಲಬ್ ವೆಬ್ಸೈಟ್ http://www.mccabudhabi.com ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿ ಎಂಸಿಸಿ ಅಧ್ಯಕ್ಷ  ಕೆ. ಎಚ್ ಲತೀಫ್ ಕಕ್ಕಿಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಲತೀಫ್ – 0506713247 ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X