Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮನದ ಪರದೆ ಸರಿಸುವ ರಜಿಯಾ ಕವಿತೆಗಳು

ಮನದ ಪರದೆ ಸರಿಸುವ ರಜಿಯಾ ಕವಿತೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ5 Feb 2018 12:15 AM IST
share
ಮನದ ಪರದೆ ಸರಿಸುವ ರಜಿಯಾ ಕವಿತೆಗಳು

ಹೆಣ್ಣಿನ ಒಳಗೆ ತೊಳಲಾಟಗಳನ್ನು, ಸಂಘರ್ಷಗಳನ್ನು ಯಾವ ಸಿದ್ಧಾಂತ, ಪಂಥಗಳ ಗಡಿಗೆ ಒಳಪಡಿಸದೆಯೇ ಕವಿತೆಗಳಾಗಿ ಅಭಿವ್ಯಕ್ತಿಗೊಳಿಸುತ್ತಾ ಬಂದವರು ಡಿ. ಬಿ. ರಜಿಯಾ. ಕನ್ನಡದ ಬೆರಳೆಣಿಕೆ ಮುಸ್ಲಿಮ್ ಹಿನ್ನೆಲೆಯಿರುವ ಸೂಕ್ಷ್ಮ ಕವಯಿತ್ರಿಯರಲ್ಲಿ ಇವರು ಒಬ್ಬರು. ಇವರ ಕವಿತೆಗಳ ಕುರಿತಂತೆ ಎಸ್. ಜಿ. ಸಿದ್ದರಾಮಯ್ಯ ಹೀಗೆ ಬರೆಯುತ್ತಾರೆ ‘‘ಯಾವುದೇ ಅರಗದ ಸಿದ್ಧಾಂತಗಳಿಗೆ ಬದ್ಧವಾಗಿ ಕಾವ್ಯ ಕಟ್ಟುವ ಹವಣಿಕೆ ರಜಿಯಾ ಅವರಲ್ಲಿಲ್ಲ. ಇಲ್ಲಿ ಅನುಭವ ಮಾತಾಡಿದೆ. ಮಾಗಿದ ಮನಸ್ಸು ಆದ ಅನುಭವಗಳನ್ನು ಅವಲೋಕಿಸಿ, ಆಲೋಚಿಸಿ ಕಾವ್ಯಾನುಬಂಧಕ್ಕೆ ಒಳಗು ಮಾಡಿದೆ. ಕಾವ್ಯ ಹೀಗೇೆ ಇರಬೇಕೆನ್ನುವ ಕಲಾತ್ಮಕ ಸಿದ್ಧಾಂತದ ಪರಿಭಾಷಾಪಟುಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲವೆನ್ನುವಂತೆ ಇವರ ರಚನೆಗಳು ಹರಿದಿವೆ’
  ‘ಪರದೆ ಸರಿದಂತೆ’ ರಜಿಯಾ ಅವರ ಏಳನೇ ಕೃತಿ. 30ಕ್ಕೂ ಅಧಿಕ ಕವಿತೆಗಳು ಇಲ್ಲಿವೆ. ಹೆಣ್ಣಾಳು ಒಬ್ಬಳು ಕೂಲಿ ದುಡಿಯುತ್ತಾ ಬದುಕಿನ ಸಂಕಟಗಳನ್ನು ಎದುರಿಸುವ ಪರಿ ಅಸಹಾಯಕತೆಯೇ ಅಥವಾ ಎದೆಗಾರಿಯೇ ಎಂಬ ಪ್ರಶ್ನೆಯನ್ನು ಎತ್ತುವ ‘ಕನ್ನಡಿ’, ಆಚಾರ ಸಂಪ್ರದಾಯಗಳನ್ನು ನೆಚ್ಚಿಕೊಂಡಿರುವ ಅಸಮಾನತೆಯ ಕುರಿತಂತೆ ಆಕ್ರೋಶ ವ್ಯಕ್ತಪಡಿಸುವ ‘ಸ್ವರೂಪ’, ಬದುಕಿನ ಯಾತ್ರೆಯ ಅಲೌಕಿಕತೆಯನ್ನು ಯೋಚಿಸುವಂತೆ ಮಾಡುವ ‘ಅ-ಅಲೋಕ’, ಹಿಂಸೆ, ಕ್ರೌರ್ಯಗಳ ಮೂಲಕ ಕಾಡಾಗುವುದಕ್ಕೆ ಹೊರಟಿರುವ ನಾಡಿನ ಕುರಿತಂತೆ ಕಳವಳ ವ್ಯಕ್ತಪಡಿಸುವ ‘ಅಭೇದ್ಯ’, ಬದಲಾದ ಕಾಲ ಮತ್ತು ಒಂಟಿತನದ ತೀವ್ರತೆಯನ್ನು ಹೇಳುವ ‘ಕಾಯುವ ಹೊತ್ತು’ ಹೀಗೆ ಬದುಕಿನ ಮಗ್ಗುಲಿನ ಕಡೆಗೆ ಅವರ ಕಣ್ಣುಗಳು ಹರಿಯುತ್ತವೆ. ಸಮಾಜದ ಬೇರೆ ಬೇರೆ ಸಮಸ್ಯೆಗಳು ಲೇಖಕಿಯನ್ನು ಕಾಡಿದ್ದು ಇಲ್ಲಿ ಅದು ಕವನವಾಗಿವೆ. ಹೆಣ್ಣು ಎನ್ನುವ ಮಿತಿಗಳಾಚೆಗೆ ಎಲ್ಲ ಮನುಷ್ಯರ ನೋವು, ದುಮ್ಮಾನಗಳನ್ನು ಕವಿತೆ ಹೇಳುತ್ತದೆ. ತಾಯಿ ಮಗುವಿನ ಸಂಬಂಧ, ಆಧುನಿಕತೆಯ ಸುಳಿಗೆ ಸಿಕ್ಕಿ ಕಳೆದು ಹೋಗುತ್ತಿರುವ ಮನುಷ್ಯ, ಹಿಡಿದಂತೆ ಜಾರುವ ಕನಸುಗಳು, ಸೂಫಿ ಜಗತ್ತಿನ ಅಲೌಕಿಕತೆ ಹೀಗೆ...ಬಗೆ ಬಗೆಯಾಗಿ ರಜಿಯಾ ಕವಿತೆಗಳು ನಮ್ಮನ್ನು ಕಾಡುತ್ತವೆ.
ಕೌದಿ ಪ್ರಕಾಶನ ಶಿವಮೊಗ್ಗ ಹೊರತಂದಿರುವ ಈ ಕೃತಿಯ ಮುಖಬೆಲೆ 70 ರೂಪಾಯಿ. ಆಸಕ್ತರು 98860 64444 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X