Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ5 Feb 2018 12:17 AM IST
share
ಓ ಮೆಣಸೇ..

ಒಬ್ಬ ಪುತ್ರಿ ಹತ್ತು ಪುತ್ರರಿಗೆ ಸಮ - ನರೇಂದ್ರ ಮೋದಿ, ಪ್ರಧಾನಿ

ಅದಕ್ಕೆಂದೇ ಪುತ್ರಿಯರ ಸಂಖ್ಯೆಯನ್ನು ಇಳಿಸಲು ಹೊರಟಿದ್ದೀರಾ?

---------------------
 ಕ್ರೈಮ್‌ಗಳಲ್ಲೂ ಜಾತಿ ಹುಡುಕುವ ಕೆಲಸ ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ - ಸಿ.ಟಿ.ರವಿ, ಶಾಸಕ

 ಹೆಣಗಳಲ್ಲಿ ಧರ್ಮ ಹುಡುಕುವುದಷ್ಟೇ ಸರಿ ಅಂತೀರಾ?

---------------------

ಜೆಡಿಎಸ್‌ಗೆ ಅಧಿಕಾರ ನೀಡಿದರೆ ರಾಮರಾಜ್ಯ ನಿರ್ಮಿಸುತ್ತೇವೆ - ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನಾಡಿನ ಜನರು ಬೆಂಕಿಗೆ ಹಾರಲು ಸಿದ್ಧರಾಗಬೇಕಾಗುತ್ತದೆ.

---------------------

ಜನಾರ್ದನ ಪೂಜಾರಿ ಆತ್ಮಕತೆ ಪಾಪದ ಕೊಡ - ಮಧು ಬಂಗಾರಪ್ಪ, ಶಾಸಕ

ಬಂಗಾರಪ್ಪರು ತುಂಬಿಸಿ ಕೊಟ್ಟ ಪಾಪದ ಕೊಡ ಅದು.

---------------------
ಪದ್ಮ ಪ್ರಶಸ್ತಿಗೆ ಶಿಫಾರಸು ಬೇಕಿಲ್ಲ - ನರೇಂದ್ರ ಮೋದಿ, ಪ್ರಧಾನಿ

ಮೋದಿ ಭಜನೆಯ ಅಗತ್ಯವಂತೂ ಇದೆ.

---------------------

ದೇವೇಗೌಡರು ನಮ್ಮ ಮನೆ ದೇವರು, ಅವರು ಆಡಿಸಿದಂತೆ ಆಡುತ್ತೇನೆ -ಶಿವರಾಮೇಗೌಡ, ಮಾಜಿ ಶಾಸಕ

ಇದನ್ನೂ ನಿಮ್ಮ ಬಾಯಲ್ಲಿ ಆ ಮನೆ ದೇವರೇ ಆಡಿಸಿರಬೇಕು.

---------------------
ಕಾವೇರಿ ತೀರ್ಪು ನೆನೆದು ನಿದ್ದೆ ಬರುತ್ತಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಹುಶಃ ಕಾವೇರಿಯ ಜೊತೆ ಜೊತೆಗೆ ಜನರು ನೀಡಲಿರುವ ತೀರ್ಪು ಕೂಡ ಕಾಡುತ್ತಿರಬೇಕು.

---------------------

ಲೋಕಸಭೆಯ ಶ್ರೀಮಂತ ಸಂಸದರು ಇನ್ನುಳಿದ ಅವಧಿಗೆ ವೇತನ ತ್ಯಜಿಸಲಿ - ವರುಣ್‌ಗಾಂಧಿ, ಸಂಸದ

ಬಿಜೆಪಿ ತ್ಯಜಿಸುತ್ತಿರುವ ಸೂಚನೆ.

---------------------

ಶವ ಮತ್ತು ಸಾವಿನಲ್ಲಿ ಯಾರೂ ರಾಜಕೀಯ ಮಾಡಬಾರದು - ಯು.ಟಿ.ಖಾದರ್, ಸಚಿವ

ಉಳಿದ ವಿಷಯಗಳಲ್ಲಿ ರಾಜಕೀಯ ಮಾಡುವುದಕ್ಕೆ ತಮ್ಮ ಸಮ್ಮತಿಯಿದೆಯೇ?

---------------------

ಕಂಬಳವು ಕೋಣವನ್ನು ಓಡಿಸುವ ಕ್ರೀಡೆಯಾಗಿದ್ದು ಇದರಲ್ಲಿ ಹಿಂಸೆ ಇಲ್ಲ - ಬಿ.ವಿ.ಆಚಾರ್ಯ, ರಾಜ್ಯದ ಮುಖ್ಯ ಅಡ್ವಕೇಟ್ ಜನರಲ್

ಒಮ್ಮೆ ನಿಮ್ಮನ್ನು ಓಡಿಸಿದಾಗ ಗೊತ್ತಾಗಬಹುದು, ಹಿಂಸೆಯೋ ಅಹಿಂಸೆಯೋ ಎನ್ನುವುದು.

---------------------

ಕರ್ನಾಟಕದ ಮುಸ್ಲಿಮರು ಬುದ್ಧಿವಂತರು - ಝಮೀರ್ ಅಹ್ಮದ್, ಶಾಸಕ

ಪದೇ ಪದೇ ನೀವು ಶಾಸಕರಾಗುತ್ತಿರುವುದು ನೋಡಿದಾಗ ಹಾಗನ್ನಿಸುತ್ತಿಲ್ಲ.

---------------------
ವಿಶ್ವಕಲ್ಯಾಣ ನಮ್ಮ ಗುರಿ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

ನಾಗ್ಪುರ ನೀವು ಹೇಳುತ್ತಿರುವ ವಿಶ್ವ ಇರಬೇಕು.

---------------------
ರಾಜಕೀಯ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ - ಪ್ರಮೋದ್ ಮಧ್ವರಾಜ್, ಸಚಿವ

ಅನುಭವದ ಮಾತು.

---------------------

ಮಾತೃಭಾಷಾ ಶಿಕ್ಷಣದಿಂದ ಮಾತ್ರ ಉತ್ತಮ ಸಂಸ್ಕಾರ ಲಭಿಸಲು ಸಾಧ್ಯ - ನಳಿನ್‌ಕುಮಾರ್ ಕಟೀಲು, ಸಂಸದ

ನಿಮಗೆ ಮಾತೃಭಾಷಾ ಶಿಕ್ಷಣ ದಕ್ಕದೇ ಇರುವ ಬಗ್ಗೆ ಮಂಗಳೂರು ಪರಿತಪಿಸುತ್ತಿದೆ.

---------------------

ಬಿಜೆಪಿಯಲ್ಲಿರುವವರೆಲ್ಲರೂ ಭಯದಲ್ಲಿದ್ದಾರೆ - ಯಶವಂತ ಸಿನ್ಹಾ, ಬಿಜೆಪಿ ನಾಯಕ

ಇದೇ ಮೊದಲ ಬಾರಿಗೆ ಭಯೋತ್ಪಾದನೆಯ ಅನುಭವ ಅವರಿಗಾಗಿದೆ.

---------------------

ಬೇರೆ ಪಕ್ಷಕ್ಕಿಂತ ನಮ್ಮ ಪಕ್ಷದವರೇ ನಮ್ಮನ್ನು ಸೋಲಿಸುವ ಸಂಚು ಮಾಡುತ್ತಾರೆ - ಡಿ.ಕೆ.ಶಿವಕುಮಾರ್, ಸಚಿವ

ಸಂಚು ಮಾಡಿ ಪಳಗಿದವರಿಂದ ಈ ಮಾತೇ?
---------------------

ಬಿಜೆಪಿಗೆ ಎಸ್.ಎಂ.ಕೃಷ್ಣ ಬೇಕು, ನಾನು ಬೇಡ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ನೀವು ಬಿಜೆಪಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಬೇಡವಾಗಿದ್ದೀರಿ.

---------------------
ಪ್ರಧಾನಿ ನರೇಂದ್ರ ಮೋದಿ ಒಬ್ಬ ಮೌನಿ ಬಾಬಾ - ವಿ.ಎಸ್.ಉಗ್ರಪ್ಪ, ವಿ.ಪ.ಸದಸ್ಯ

ಆ ಮೌನಕ್ಕೆ ದೇಶ ಭಾರೀ ಬೆಲೆ ತೆತ್ತಿದೆ.

---------------------

ನಾನು ಮದುವೆಯಾಗಿದ್ದಿದ್ದರೆ ನನಗೆ ಚಿಕ್ಕ ಪರಿವಾರ ಇರುತ್ತಿತ್ತು -ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಅರವಿಂದ ಕೇಜ್ರಿವಾಲ್ ಬದಲು ಪರಿವಾರದವರನ್ನೇ ಮುಖ್ಯಮಂತ್ರಿ ಮಾಡಬಹುದಿತ್ತು .

---------------------
ನನಗೊಂದು ಗಾಯವಾಗಿತ್ತು, ಅದೀಗ ಗುಣವಾಗಿದೆ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಶಾಸಕ

ಹೊಸ ಗಾಯಕ್ಕಾಗಿ ಮತ್ತೆ ಹಂಬಲಿಕೆಯೆ?

---------------------

ದೇವೇಗೌಡರ ನಾಮ ಬಲವೇ ಜೆಡಿಎಸ್‌ಗೆ ಶ್ರೀರಕ್ಷೆ - ಶಿವರಾಮೇಗೌಡ, ಮಾಜಿ ಶಾಸಕ

ಅದು ಬರೇ ನಾಮವಲ್ಲ, ಜನರ ಪಾಲಿನ ಪಂಗನಾಮ.

---------------------
ಹೈಕಮಾಂಡ್ ಬಯಸಿದರೆ ಮುಖ್ಯಮಂತ್ರಿಯಾಗಲು ಸಿದ್ಧ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ದಲಿತರಿಗಂತೂ ನಿಮ್ಮ ಕುರಿತು ಆ ಬಯಕೆ ಇಲ್ಲ.

---------------------

ಕಾಸಗಂಜ್ ಗಲಭೆ ಕ್ಷುಲ್ಲಕ ವಿಷಯ - ಉತ್ತರ ಪ್ರದೇಶದ ಸಚಿವ

ಹಾಗಾದರೆ ಗಂಭೀರವಾಗಿ ಇನ್ನೊಂದು ಗಲಭೆಗೆ ಯೋಜನೆ ಹಾಕಿಕೊಂಡಿದ್ದೀರಾ?

share
ಪಿ.ಎ.ರೈ
ಪಿ.ಎ.ರೈ
Next Story
X