ಕೈಕುಂಜೆ: ಸ್ಮಶಾನದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ, ಫೆ. 5: ವಿವಾಹಿತ ವ್ಯಕ್ತಿಯೊರ್ವ ಸ್ಮಶಾನದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡಿನ ಕೈಕುಂಜೆಯ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ನಡೆದಿದೆ.
ರಾಜೇಶ್ ಬಿ.ಸಿ.ರೋಡ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಅಂತ್ಯಕ್ರಿಯೆಗೆ ಬೇಕಾದ ಮಡಿಕೆ, ಬಿಳಿಬಟ್ಟೆ, ಊದುಬತ್ತಿ ಮೊದಲಾದ ವಸ್ತುಗಳನ್ನು ಸ್ಮಶಾನಕ್ಕೆ ತಂದಿರಿಸಿ, ಅಲ್ಲಿಂದಲೇ ತನ್ನ ಅತ್ತೆಗೆ ದೂರವಾಣಿ ಕರೆ ಮಾಡಿ, ತಾನು ಸಾಯುವುದಾಗಿ ತಿಳಿಸಿ ಸ್ಮಶಾನದ ಮೇಲ್ಛಾವಣಿಯ ಕಬ್ಬಿಣದ ರಾಡಿಗೆ ನೇಣು ಬಿಗಿದುಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಮೃತದೇಹದ ಮಹಜರು ನಡೆಸಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾ ಗಿದೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story





