ಪೊಲೀಸ್ ಇಲಾಖೆ ಹುದ್ದೆಗೆ ಮೌಖಿಕ ಪರೀಕ್ಷೆ
ಉಡುಪಿ, ಫೆ.5: ವಿಶೇಷ ಆರ್‌ಎಸ್‌ಐ (ಕೆಎಸ್‌ಆರ್‌ಪಿ-ಪುರುಷ)-28, ಸಬ್-ಇನ್‌ಪೆಕ್ಟರ್ (ಕೆಎಸ್‌ಐಎಸ್‌ಎಪ್)-17 ಹಾಗೂ ಪಿಎಸ್‌ಐ (ಎಫ್‌ಪಿಬಿ) ಪುರುಷ ಮತ್ತು ಮಹಿಳೆ-05 ಹಾಗೂ ಸೇವಾನಿರತ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ.
ಈಗಾಗಲೇ ಅರ್ಹ ಅ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮದಂತೆ ಮುಂದಿನ ಹಂತದ ವೌಖಿಕ ಪರೀಕ್ಷೆ ನಡೆಸಬೇಕಿದ್ದು, ಒಟ್ಟು 50 ಹುದ್ದೆಗಳಿಗೆ 1:2ರ ಅನುಪಾತದಂತೆ 100 ಅ್ಯರ್ಥಿ ಗಳಿಗೆ ವೌಖಿಕ ಪರೀಕ್ಷೆಯನ್ನು ನಡೆಸಲಾಗುವುದು.
ಈಗಾಗಲೇ ಅರ್ಹ ಅ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮದಂತೆ ಮುಂದಿನ ಹಂತದ ವೌಖಿಕ ಪರೀಕ್ಷೆ ನಡೆಸಬೇಕಿದ್ದು, ಒಟ್ಟು 50 ಹುದ್ದೆಗಳಿಗೆ 1:2ರ ಅನುಪಾತದಂತೆ 100 ಅಭ್ಯರ್ಥಿ ಗಳಿಗೆ ಮೌಖಿಕ ಪರೀಕ್ಷೆಯನ್ನು ನಡೆಸಲಾಗುವುದು. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ನೇಮಕಾತಿ), ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು ಇವರ ಕಚೇರಿಯಲ್ಲಿ ಒಟ್ಟು 100 ಮಂದಿ ಅಭ್ಯರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ಫೆ.8,9,14 ಮತ್ತು 15ರಂದು ಪ್ರತಿ ದಿನ 25 ಅಭ್ಯರ್ಥಿಗಳಂತೆ ನಡೆಸಲು ತೀರ್ಮಾನಿಸಲಾಗಿದೆ.
ಮೌಖಿಕ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಕರೆ ಪತ್ರಗಳನ್ನು ಫೆ.6 ರಂದು ಇಲಾಖೆಯ ಅಧಿಕೃತ ವೆಬ್‌ಸೈಟ್- www.ksp.gov.in-ನಿಂದ ಪಡೆದುಕೊಂಡು ನಿಗದಿತ ದಿನದಂದು ಮೌಖಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಇವರ ಪ್ರಕಟಣೆ ತಿಳಿಸಿದೆ.







