ಎಣ್ಣೆಹೊಳೆ ಅಪಘಾತ: ಐವರಿಗೆ ಗಾಯ
ಅಜೆಕಾರು, ಫೆ.5: ಅಜೆಕಾರು ಎಣ್ಣೆಹೊಳೆ ರಾಧಾ ನಾಯಕ್ ಶಾಲೆಗೆ ಹೋಗುವ ಅಡ್ಡರಸ್ತೆ ಬಳಿ ಫೆ.4ರಂದು ಮಧ್ಯಾಹ್ನ ವೇಳೆ ಚಾರ್ವೆಲೆಟ್ ವಾಹನ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಐವರು ಗಾಯ ಗೊಂಡ ಬಗ್ಗೆ ವರದಿಯಾಗಿದೆ.
ಸಾಗರದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಚಾರ್ವೆಲೆಟ್ ವಾಹನಕ್ಕೆ ಎದುರಿ ನಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ವಾಹನದಲ್ಲಿದ್ದ ಶಾರದ, ಜಿ.ರಾಜು, ಚಂದ್ರ ಶೇಖರ, ಬಾನುಮತಿ, ಸುಮತಿ ಎಂಬವರು ಗಾಯಗೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





