ರಾಷ್ಟ್ರೀಯ ಸಾಧನ ಪರೀಕ್ಷೆಗೆ ಉ.ಕ. ಜಿಲ್ಲೆಯಿಂದ 2948 ವಿದ್ಯಾರ್ಥಿಗಳು

ಭಟ್ಕಳ, ಫೆ. 5: ಇಂದು ರಾಷ್ಟ್ರಾದ್ಯಂತ ಏಕ ಕಾಲದಲ್ಲಿ ಜರಗಿದ ರಾಷ್ಟ್ರೀಯ ಸಾಧನ ಸಮೀಕ್ಷಯಲ್ಲಿ ಉತ್ತರಕನ್ನಡ ಜಿಲ್ಲೆಯ ಐದು ತಾಲೂಕುಗಳಿಂದ 2948 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರವಾರ ಶೈಕ್ಷಣಿಕ ಜಿಲ್ಲೆಯ 22 ಸರಕಾರಿ ಶಾಲೆಗಳು, 38 ಅನುದಾನಿತ ಶಾಲೆ ಹಾಗೂ 20 ಅನುದಾನ ರಹಿತ ಶಾಲೆಗಳಿಂದ 1483 ವಿದ್ಯಾರ್ಥಿನಿಯರು ಹಾಗೂ 1465 ವಿದ್ಯಾರ್ಥಿಗಳು ಸಮೀಕ್ಷೆಗೊಳಪಟ್ಟಿದ್ದಾರೆ ಎಂದು ಜಿಲ್ಲಾ ನೊಡೆಲ್ ಅಧಿಕಾರಿ ಶ್ರೀಕಾಂತ್ ಹೆಗಡೆ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ಭಟ್ಕಳ ತಾಲೂಕಿನ 21 ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಂದ 385 ವಿದ್ಯಾರ್ಥಿಗಳು, 399 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 808 ವಿದ್ಯಾರ್ಥಿಗಳು ಈ ಸಮೀಕ್ಷೆಗೆ ಒಳಪಟ್ಟರು. ಅಂಕೋಲಾ ತಾಲೂಕಿನಲ್ಲಿ 14 ಪ್ರೌಢಶಾಲೆಗಳು, ಭಟ್ಕಳ 21, ಹೊನ್ನಾವರ 20, ಕಾರವಾರ 21, ಕುಮಟಾ ತಾಲೂಕಿನ 4 ಆಯ್ದ ಪ್ರೌಢಶಾಲೆಗಳಲ್ಲಿ ಇಂದು ಸಾಧನ ಸಮೀಕ್ಷಯ ಪರೀಕ್ಷಗಳು ನಡೆದವು. (NAS) ರಾಷ್ಟ್ರೀಯ ಸಾಧನೆ ಸಮೀಕ್ಷೆಯು ಭಾರತದ ಎಲ್ಲಾ ಜಿಲ್ಲೆಗಳ ಆಯ್ದ ಶಾಲೆಗಳ ಸಮೀಕ್ಷೆಯ ಮೂಲಕ ಸರ್ಕಾರಿ, ಸರ್ಕಾರಿ ಅನುಧಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಗುರಿಯನ್ನು ಹೊಂದಿದೆ. ಶೋಧನೆಗಳನ್ನು ಶೈಕ್ಷಣಿಕ ನೀತಿ, ಯೋಜನೆ ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಕಗಳು ಸುಧಾರಣೆಗೆ ಒಳಹರಿವುಗಳಾಗಿ ಬಳಸಲಾಗುತ್ತದೆ. (RMSA) National Achievement Survey (NAS) Class X (Cycle-2) ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಎಸ್.ಎಸ್.ಎ. ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಜಾರಿಗೆ ತಂದ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮವು ಪ್ರೌಢ ಶಿಕ್ಷಣದ ನಂತರ ವಿದ್ಯಾರ್ಥಿಗಳು ಉನ್ನತ ಮಟ್ಟದ ಜ್ಞಾನ ಮತ್ತು ಕೌಶಲವನ್ನು ಪಡೆಯಲು ನೆರವಾಗಿದೆ. ಆದ್ದರಿಂದ ಪ್ರೌಢಶಾಲಾ ಹಂತದಲ್ಲಿ ಕಾಲಾನುಕ್ರಮವಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡುವುದು ಅಪೇಕ್ಷಣೀಯವಾಗಿದೆ. ದೇಶದಲ್ಲಿ ಸುಮಾರು 30 ರಾಷ್ಟ್ರೀಯ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳಿದ್ದು, ಅವುಗಳು ಹತ್ತನೇ ತರಗತಿಗೆ ನಿಯಮಿತವಾಗಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಉತ್ತೀರ್ಣ-ಅನುತ್ತೀರ್ಣ ಎಂಬ ಎರಡು ಮಾನದಂಡಗಳನ್ನು ನೀಡುತ್ತಿವೆ. ರಾಜ್ಯಮಟ್ಟದ ಮೌಲ್ಯಾಂಕನದ ಮೂಲಕ ಶೈಕ್ಷಣಿಕ ಮಂಡಳಿಗಳಿಗೆ ರಾಜ್ಯಾದ್ಯಂತ ಇರುವ ಕಲಿಕೆಯ ಮಟ್ಟವನ್ನು ಅಧ್ಯಯನ ಮಾಡಲು, ಶಿಕ್ಷಣದ ಗುಣಮಟ್ಟವನ್ನು ಅರಿಯಲು ಮತ್ತು ಅದನ್ನು ಉತ್ತಮ ಪಡಿಸಲು ಸಾಧ್ಯವಾಗುತ್ತದೆ.
ರಾಷ್ಟ್ರೀಯ ಸಾಧಾನಾ ಸಮೀಕ್ಷೆ : NCERT NAS MHRD NCERT NAS Class X Cycle-2 ಈ ಹಿನ್ನೆಲೆಯಲ್ಲಿ ಯು 2015ರಲ್ಲಿ ಮೊದಲ ಸುತ್ತಿನ ನ್ನು ಹತ್ತನೇ ತರಗತಿಗೆ ಕೈಗೊಂಡಿದೆ. ಕಂಡುಬಂದ ಸಮೀಕ್ಷೆಯ ಫಲಿತಾಂಶಗಳನ್ನು ವ್ಯಾಪಕವಾಗಿ ಸಂಬಂಧಪಟ್ಟ ಮಂಡಳಿಗಳು / ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಕಂಡುಬಂದಿರುವ ಸುಧಾರಣೆಯನ್ನು ಅವಲೋಕಿಸಿ ಎರಡನೇ ಹಂತದ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಯ ಶೈಕ್ಷಣಿಕ ಸಮೀಕ್ಷಾ ವಿಭಾಗವು 2017ರಲ್ಲಿ ನಡೆಸಲು ನಿರ್ಧರಿಸಿದೆ.
ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯಗಳನ್ನು ಘಟಕಗಳೆಂದು ಪರಿಗಣಿಸಲಾಗಿತ್ತು. ಆದರೆ ಎರಡನೇ ಹಂತದ ಸಮೀಕ್ಷೆಯಲ್ಲಿ ಜಿಲ್ಲೆಗಳನ್ನು ಘಟಕ ಗಳಾನ್ನಾಗಿ ಪರಿಗಣಿಸಲಾಗಿದೆ.
NAS Class X Cycle-2 (MIL) Cycle-Cycleರ ಪ್ರಮುಖ ಉದ್ದೇಶಗಳು :- ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಆಧುನಿಕ ಭಾರತೀಯ ಭಾಷೆ ವಿಷಯಗಳಲ್ಲಿನ ಕಲಿಕಾ ಸಾಧನೆಯ ಮಟ್ಟವನ್ನು ಅಧ್ಯಯನ ಮಾಡುವುದು. - ಪ್ರದೇಶ, ಲಿಂಗ, ಸಾಮಾಜಿಕ ಗುಂಪು, ಆಡಳಿತ ಮಂಡಳಿ ಹಾಗೂ ರಾಜ್ಯಪರೀಕ್ಷಾ ಮಂಡಳಿಗಳು ಮುಂತಾದವುಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡುವುದು. ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರಭಾವ ಬೀರುವ ಮಧ್ಯಂತರ ಅಂಶಗಳಾದ ಕುಟುಂಬದ ಹಿನ್ನಲೆ, ಶಾಲೆ, ಶಿಕ್ಷಕ ವೃಂದ ಮುಂತಾದವುಗಳನ್ನು ಅಧ್ಯಯನ ಮಾಡುವುದು.
NAS Class X (Cycle-2) CBSE ICSE NAS X Cycle-2 (MIL) ಗೆ ಎಲ್ಲಾ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಧನೆಗಳನ್ನು ಹೋಲಿಕೆ ಮಾಡುವುದು. ವ್ಯಾಪ್ತಿ :- - ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ಲಾ ಜಿಲ್ಲೆಗಳನ್ನು ಇದು ಒಳಗೊಂಡಿರುತ್ತದೆ.
ಈ ಸಮೀಕ್ಷೆಗೆ ಎಲ್ಲಾ ರಾಜ್ಯಗಳ ಪರೀಕ್ಷಾ ಮಂಡಳಿಯಿಂದ ಅನುಮೋದನೆ ಪಡೆದಿರುವ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳು, ಮತ್ತು ಪಠ್ಯಕ್ರಮದ ವಿದ್ಯಾರ್ಥಿಗಳನ್ನು ರ್ಯಾಂಡಮ್ ಆಯ್ಕೆಯ ಮೂಲಕ ಮೌಲ್ಯಾಂಕನಕ್ಕೆ ಒಳಪಡಿಸಲಾಗುವುದು.
ಸಮೀಕ್ಷೆಯು ಐದು ವಿಷಯಗಳನ್ನು ಅಂದರೆ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಒಂದು ಆಧುನಿಕ ಭಾರತೀಯ ಭಾಷೆಯನ್ನು ಒಳಗೊಂಡಿದೆ. ಪ್ರತಿ ರಾಜ್ಯದ ಪ್ರತಿ ಜಿಲ್ಲೆಗಳಿಂದ 80 ಶಾಲೆಗಳು ಹಾಗೂ ಆಯ್ಕೆಯಾದ ಪ್ರತಿ ಶಾಲೆಯಿಂದ ಗರಿಷ್ಠ 45 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. -ಎಂ.ಆರ್.ಮಾನ್ವಿ







