ಚೀನಾ: ಕಾರ್ಖಾನೆಯಲ್ಲಿ ಅನಿಲ ಸೋರಿಕೆ; 8 ಸಾವು

ಸಾಂದರ್ಭಿಕ ಚಿತ್ರ
ಬೀಜಿಂಗ್, ಫೆ. 5: ದಕ್ಷಿಣ ಚೀನಾದ ರಾಜ್ಯ ಗ್ವಾಂಗ್ಡಾಂಗ್ನ ಉಕ್ಕಿನ ಕಾರ್ಖಾನೆಯೊಂದರಲ್ಲಿ ಸೋಮವಾರ ಪೈಪ್ಲೈನ್ನಿಂದ ಅನಿಲ ಸೋರಿಕೆಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಶಾವೊಗುವನ್ ಕಬ್ಬಿಣ ಮತ್ತು ಉಕ್ಕು ಕಂಪೆನಿಯ ಸಾಂಗ್ಶನ್ ಸ್ಥಾವರದಲ್ಲಿ ಮುಂಜಾನೆ 3 ಗಂಟೆ ಹೊತ್ತಿಗೆ ಸೋರಿಕೆ ಸಂಭವಿಸಿದೆ ಎಂದು ಶಾವೊಗುವನ್ ನಗರಾಡಳಿತ ತನ್ನ ಮೈಕ್ರೊಬ್ಲಾಗ್ನಲ್ಲಿ ಹಾಕಿದ ವರದಿಯಲ್ಲಿ ತಿಳಿಸಿದೆ.
Next Story





