ಫೆ. 22ರಂದು ಮತದಾರರ ಪಟ್ಟಿ ಪ್ರಕಟ: ಇವಿಎಂ ಜತೆ ವಿವಿ ಪ್ಯಾಟ್ ಬಳಕೆ; ದ.ಕ ಜಿಲ್ಲಾಧಿಕಾರಿ
ಮಂಗಳೂರು, ಫೆ.5 : ದಕ್ಷಿಣ ಕನ್ನಡ ಜಿಲ್ಲಾ ಮತದಾರರ ಪಟ್ಟಿ ಫೆ. 22ರಂದು ಪ್ರಕಟಿಸಲಾಗುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ಜತೆಗೆ ವಿವಿ ಪ್ಯಾಟ್‌ಗಳನ್ನು (ವೋಟರ್ ವೆರಿಪೈಡ್ ಪೇಪರ್ ಆಡಿಟ್ ಟ್ರಯಲ್ ) ಕೂಡಾ ಬಳಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ದ.ಕ.ಜಿಲ್ಲಾಡಳಿತ ಪೂರ್ವಸಿದ್ದತೆಗಳನ್ನು ನಡೆಸುತ್ತಿದೆ ಎಂದರು.
ಈಗಾಗಲೇ ಎವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ವ್ಯವಸ್ಥೆಗೊಳಿಸುವ ಕಾರ್ಯ ಆರಂಭಿಸಲಾಗಿದೆ. ವಿವಿ ಪ್ಯಾಟ್ ಬಳಕೆ ಈ ಬಾರಿಯ ಚುನಾವಣೆ ವಿಶೇಷತೆಯಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಅಳವಡಿಸಲಾಗುವುದು. ವಿವಿ ಪ್ಯಾಟ್ ಎಂಬುದು ಒಂದು ಪ್ರಿಂಟರ್ ಮಾದರಿಯ ಯಂತ್ರ. ಮತದಾನ ಮಾಡಿದ ಬಳಿಕ ಮತದಾರ ತಾನು ಮಾಡಿದ ಮತ ಯಾವ ಚಿಹ್ನೆಗೆ ಹೋಗಿದೆ ಎಂಬುದನ್ನು ಇದರಲ್ಲಿ ನೋಡಬಹುದು ಎಂದರು.
ಮತದಾರರು ತಾನು ಮತ ಚಲಾಯಿಸಬೇಕಾದ ಮತಗಟ್ಟೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಆ್ಯಪ್‌ನ್ನು ಸಿದ್ದಪಡಿಸಲಾಗುತ್ತಿದೆ ಎಂದೂ ಅವರು ಹೇಳಿದರು.





