ಐಪಿಎಲ್‌ಗೆ ಶೇನ್ ವಾರ್ನ್ ವಾಪಸ್?
ಜೈಪುರ, ಫೆ.5: ಆಸ್ಟ್ರೇಲಿಯದ ಸ್ಪಿನ್ ದಂತಕತೆ ಶೇನ್ ವಾರ್ನ್ 11ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂಲಕ ಮತ್ತೆ ಐಪಿಎಲ್‌ಗೆ ವಾಪಸಾಗಲಿದ್ದಾರೆ. ವಾರ್ನ್ ರವಿವಾರ ಟ್ವೀಟ್ ಮೂಲಕ ಈ ಸುಳಿವು ನೀಡಿದ್ದಾರೆ.
‘‘ಐಪಿಎಲ್ 2018ರಲ್ಲಿ ಭಾಗಿಯಾಗಲು ನನಗೆ ತುಂಬಾ ಸಂತೋಷವಾಗುತ್ತಿದ್ದು, ಈ ವಾರ ಈ ಬಗ್ಗೆ ಘೋಷಣೆ ಮಾಡುತ್ತೇನೆ’’ ಎಂದು ವಾರ್ನ್ ರವಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
2008ರಲ್ಲಿ ನಡೆದ ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ ಐಪಿಎಲ್ ಚಾಂಪಿಯನ್ ಆಗಿತ್ತು. ಇದೀಗ ವಾರ್ನ್ ಅವರು ಕೋಚ್, ಸಲಹೆಗಾರ ಅಥವಾ ಯಾವುದೇ ಹುದ್ದೆಯ ಮೂಲಕ ಜೈಪುರ ಮೂಲದ ತಂಡವನ್ನು ಸೇರುವ ಸಾಧ್ಯತೆಯಿದೆ.
ರಾಜಸ್ಥಾನ ತಂಡ ಎರಡು ವರ್ಷಗಳ ನಿಷೇಧದ ಬಳಿಕ ಈ ವರ್ಷ ಐಪಿಎಲ್‌ಗೆ ವಾಪಸಾಗುತ್ತಿದೆ. ಈವರೆಗೆ ತಂಡಕ್ಕೆ ಕೋಚ್ ಅಥವಾ ಸಲಹೆಗಾರರನ್ನು ಆಯ್ಕೆ ಮಾಡಲಾಗಿಲ್ಲ. ರಾಜಸ್ಥಾನ ತಂಡ ಕೋಚ್‌ಗಾಗಿ ಹುಡುಕಾಟ ಆರಂಭಿಸಿದ್ದು, ವಾರ್ನ್ ಕೋಚ್ ಸ್ಥಾನ ತುಂಬುವ ಸಾಧ್ಯತೆ ಯಿದೆ.
Next Story