ಸೆನ್ಸೆಕ್ಸ್ ಭಾರೀ ಕುಸಿತ: ಹೂಡಿಕೆದಾರರ 5 ಲಕ್ಷ ಕೋ.ರೂ. ನಷ್ಟ
ಮುಂಬೈ, ಫೆ.6: ಕೇಂದ್ರ ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿದ್ದ ಸೆನ್ಸೆಕ್ಸ್ ಸೂಚ್ಯಂಕ ಮಂಗಳವಾರ ಬರೋಬ್ಬರಿ 1,250 ಅಂಕಗಳ ಕುಸಿತ ಕಂಡಿದೆ. ಈ ಬೆಳವಣಿಗೆಯಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ತಳಮಳ ಉಂಟಾಗಿದೆ.
ಮಂಗಳವಾರ ಆರಂಭಿಕ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ನಲ್ಲಿ ಭಾರೀ ಕುಸಿತ ಕಂಡ ಪರಿಣಾಮ ಕೆಲವೇ ಸೆಕೆಂಡ್ನಲ್ಲಿ ಹೂಡಿಕೆದಾರರ 5,40,000 ಕೋ.ರೂ. ವೌಲ್ಯದ ಸಂಪತ್ತು ನಷ್ಟವಾಗಿದೆ.
ಬರೋಬ್ಬರಿ 1,250 ಅಂಕಗಳ ಕುಸಿತದೊಂದಿಗೆ 33,482.81 ಅಂಕಗಳಿಗೆ ಇಳಿಕೆಯಾಗಿದೆ. ಇದು ಆರು ವರ್ಷಗಳ ಹಿಂದಿನ ಕನಿಷ್ಠ ಪ್ರಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಜೊತೆಗೆ ನಿಫ್ಟಿ ಕೂಡ 290.05 ಅಂಕ ಕುಸಿತ ಕಂಡು 10,376.50ಕ್ಕೆ ಕುಸಿದಿದೆ.
ಫೆ.1 ರಂದು 2018-19ರ ಕೇಂದ್ರ ಬಜೆಟ್ ಮಂಡನೆಯಾದ ಬಳಿಕ 30 ಷೇರುಗಳ ಸೂಚ್ಯಂಕ 1208 ಅಂಕ ಕುಸಿತ ಕಂಡಿತು. ಮೂರು ದಿನಗಳಲ್ಲಿ 361 ಅಂಕ ಕಳೆದುಕೊಂಡಿದೆ.
Next Story