ತನ್ನ ಮದುವೆಯ ಸುದ್ದಿಯನ್ನೇ ವರದಿ ಮಾಡಿದ ಪತ್ರಕರ್ತ!
ವಿಡಿಯೋ ವೈರಲ್

ಇಸ್ಲಾಮಾಬಾದ್, ಫೆ.6: ತನ್ನ ಮದುವೆಯ ಸುದ್ದಿಯನ್ನು ವರನ ಉಡುಪಿನಲ್ಲಿದ್ದುಕೊಂಡೇ ಪತ್ರಕರ್ತನೊಬ್ಬ ವರದಿ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ‘ಸಿಟಿ 41’ ಎಂಬ ಖಾಸಗಿ ಚಾನೆಲ್ ನ ವರದಿಗಾರ ಹನನ್ ಬುಖಾರಿ ತನ್ನ ಮದುವೆಯ ಸುದ್ದಿಯನ್ನೇ ವರದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮ ಲೈವ್ ಆಗಿ ನಡೆಯುತ್ತಿದ್ದಂತೆ ತನ್ನ ಮದುವೆಯ ವಿಷಯವನ್ನು ಹೇಳಿದ ಬುಖಾರಿ ಪತ್ನಿ, ಪೋಷಕರು ಹಾಗು ಸಂಬಂಧಿಕರ ಸಂದರ್ಶನವನ್ನು ಇದೇ ಸಂದರ್ಭ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ವರದಿಗಾರ ಕಾಲೆಳೆದಿದ್ದಾರೆ.
Next Story





