ಬಡಗಬೆಟ್ಟು ಸೊಸೈಟಿಗೆ ಪ್ರಶಸ್ತಿ

ಉಡುಪಿ, ಫೆ. 6: ಮೂಡಬಿದಿರೆಯಲ್ಲಿ ಇತ್ತೀಚೆಗೆ ನಡೆದ 9ನೇ ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಉಡುಪಿಯ ಬಡಗ ಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಶತಮಾನದ ಶ್ರೇಷ್ಠ ಸಾಂಸ್ಥಿಕ ಗೌರವ ಪ್ರಶಸ್ತಿಗೆ ಭಾಜನವಾಯಿತು.
ಪ್ರಶಸ್ತಿಯನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಾದವೈಭವಂ ವಾಸುದೇವ ಭಟ್, ಕರ್ನಾಟಕ ಸಿನಿಮಾ ಸೆನ್ಸರ್ ಮಂಡಳಿ ಸದಸ್ಯ ಜಯಪ್ರಕಾಶ್ ಶೆಟ್ಟಿ, ವಿಶ್ವನಾಥ ಶೆಣೈ, ಶೇಖರ್ ಅಜೆಕಾರು ಉಪಸ್ಥಿತರಿದ್ದರು.
Next Story





