ಉಡುಪಿ; ಅನಧಿಕೃತ ಅತಿಕ್ರಮಣ ತೆರವಿಗೆ ಸೂಚನೆ
ಉಡುಪಿ, ಫೆ.6: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ನಿರ್ಮಾಣ ಗಳು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿರುವುದು ಪುರಸಭೆ ಗಮನಕ್ಕೆ ಬಂದಿದ್ದು, ಸರಕಾರಿ ರಸ್ತೆ ಜಾಗವನ್ನು ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿರುವುದನ್ನು ತಕ್ಷಣವೇ ತೆರವುಗೊಳಿಸಲು ಕುಂದಾಪುರ ಮುಖ್ಯಾಧಿಕಾರಿಗಳು ಸೂಚಿಸಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಸರಕಾರಿ ರಸ್ತೆ, ಸ್ಥಳ ಹಾಗೂ ಪಾದಾಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿಕೊಂಡು, ಶಾಶ್ವತ ಕಟ್ಟಡಗಳು, ತಾತ್ಕಾಲಿಕ ಕಟ್ಟಡಗಳು, ಗೂಡಂಗಡಿ ಮತ್ತು ತಳ್ಳುವ ಗಾಡಿಗಳನ್ನು ಇಟ್ಟುಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಮುಂದಿನ 7 ದಿನಗಳೊಳಗೆ ಸ್ವಯಂ ತೆರವು ಗೊಳಿಸದಿದ್ದಲ್ಲಿ ಅನಧಿಕೃತ ರಚನೆಗಳನ್ನು ಪೌರಾಡಳಿತ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದು ಎಂದು ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





