ಫೆ.11: ಡಾ.ಡಿ.ಕೆ. ಚೌಟರ ‘ಮಿತ್ತಬೈಲ್ ಯಮುನಕ್ಕ್ಕ’ ಇಂಗ್ಲಿಷ್ ಆವೃತ್ತಿ ಬಿಡುಗಡೆ
ಮಂಗಳೂರು, ಫೆ.6: ಹಿರಿಯ ತುಳು ಸಾಹಿತಿ ಡಾ.ಡಿ.ಕೆ. ಚೌಟರ ‘ಮಿತ್ತಬೈಲ್ ಯಮುನಕ್ಕೆ’ ತುಳು ಕಾದಂಬರಿಯನ್ನು ಪ್ರೊ.ಬಿ. ಸುರೇಂದ್ರ ರಾವ್ ಮತ್ತು ಪ್ರೊ.ಕೆ. ಚಿನ್ನಪ್ಪಗೌಡ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದು, ಅದರ ಆವೃತ್ತಿಯ ಬಿಡುಗಡೆ ಸಮಾರಂಭವು ಫೆ.11ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.
ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಈ ಕೃತಿಯನ್ನು ಅನಾವರಣ ಮಾಡಲಿದ್ದು, ಸಾಹಿತಿ ಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾದಂಬರಿಕಾರ ಡಾ.ಡಿ.ಕೆ.ಚೌಟ, ಅನುವಾದಕರಾದ ಡಾ.ಕೆ.ಚಿನ್ನಪ್ಪಗೌಡ ಮತ್ತು ಡಾ. ಬಿ. ಸುರೇಂದ್ರ ರಾವ್ ಉಪಸ್ಥಿತರಿರುತ್ತಾರೆ.ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ ಎಂದು ಪ್ರಕಾಶಕ ಕಲ್ಲೂರು ನಾಗೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





