ರಶ್ಯ ಸಂಪರ್ಕ ಕುರಿತ ತನಿಖೆಗೆ ಹಾಜರಾಗಬೇಡಿ: ಟ್ರಂಪ್‌ಗೆ ವಕೀಲರ ಸಲಹೆ

ವಾಶಿಂಗ್ಟನ್, ಫೆ. 6: ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡ ರಶ್ಯದೊಂದಿಗೆ ಸಂಪರ್ಕ ಹೊಂದಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮುಯೆಲ್ಲರ್ ಎದುರು ಹಾಜರಾಗದಂತೆ ಟ್ರಂಪ್‌ಗೆ ಅವರ ವಕೀಲರು ಸಲಹೆ ನೀಡಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಸೋಮವಾರ ವರದಿ ಮಾಡಿದೆ.
ಆದಾಗ್ಯೂ, ಈಗ ನಡೆಯುತ್ತಿರುವ ತನಿಖೆಯ ಬಗ್ಗೆ ತಾನು ಮುಯೆಲ್ಲರ್ ಜೊತೆ ಮಾತನಾಡಲು ಬಯಸುತ್ತೇನೆ ಎಂಬುದಾಗಿ ಟ್ರಂಪ್ ಹಲವಾರು ಬಾರಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಆದರೆ, ತನಿಖಾಧಿಕಾರಿಗಳ ಬಳಿ ಸುಳ್ಳು ಹೇಳಿದ ಆರೋಪವನ್ನು ಟ್ರಂಪ್ ವಿರುದ್ಧ ಹೊರಿಸುವ ಸಾಧ್ಯತೆಗಳ ಬಗ್ಗೆ ಅವರ ವಕೀಲರು ಚಿಂತಿತರಾಗಿದ್ದಾರೆ. ಯಾಕೆಂದರೆ, ಟ್ರಂಪ್ ಈ ಮೊದಲು ತಪ್ಪು ಹಾಗೂ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದರು.
Next Story





