ಚೀನಾದಿಂದ ಕ್ಷಿಪಣಿ ನಿಗ್ರಹ ಪರೀಕ್ಷೆ

ಬೀಜಿಂಗ್, ಫೆ. 6: ಚೀನಾ ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಇನ್ನೊಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಚೀನಾ ಎಲ್ಲ ರೀತಿಯ ಕ್ಷಿಪಣಿಗಳ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದೆ. ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ನಾಶಪಡಿಸುವ ಉದ್ದೇಶದ ಕ್ಷಿಪಣಿಗಳಿಂದ ಹಿಡಿದು ಸುಧಾರಿತ ಪರಮಾಣು ಸಿಡಿತಲೆಗಳನ್ನು ಹೊರುವ ಪ್ರಕ್ಷೇಪಕ ಕ್ಷಿಪಣಿಗಳು ಚೀನಾದ ಪರೀಕ್ಷಾ ವ್ಯಾಪ್ತಿಯಲ್ಲಿವೆ.
‘‘ಭೂಮಿಯಿಂದ ಉಡಾಯಿಸುವ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ನಿಗ್ರಹ ತಂತ್ರಜ್ಞಾನವನ್ನು ಸೋಮವಾರ ಚೀನಾ ಗಡಿಯಲ್ಲಿ ಪರೀಕ್ಷಿಸಲಾಗಿದೆ’’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಈ ಪರೀಕ್ಷೆಯನ್ನು ರಕ್ಷಣಾ ಉದ್ದೇಶಕ್ಕಾಗಿ ನಡೆಸಲಾಗಿದೆ ಹಾಗೂ ಯಾವುದೇ ದೇಶವನ್ನು ಗುರಿಯಿಟ್ಟು ಮಾಡಲಾಗಿಲ್ಲ’’ ಎಂದಿದೆ.
Next Story





