ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್: ವೇಟ್ಲಿಫ್ಟಿಂಗ್ನಲ್ಲಿ ಮಹಾರಾಷ್ಟ್ರ ಕ್ಲೀನ್ಸ್ವೀಪ್ ಸಾಧನೆ
ಹೊಸದಿಲ್ಲಿ, ಫೆ.6: ವಿಶ್ವ ಯೂತ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಜೆರೆಮಿ ಲಾಲ್ರಿನೂಗ ಖೇಲೊ ಇಂಡಿಯಾ ಗೇಮ್ಸ್ನ ವೇಟ್ಲಿಫ್ಟಿಂಗ್ನಲ್ಲಿ ಚಿನ್ನ ಜಯಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ತಂಡ ಬಾಲಕರ 62 ಕೆಜಿ ವಿಭಾಗದಲ್ಲಿ ಕ್ಲೀನ್ಸ್ವೀಪ್ ಮಾಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮಿರೊರಾಂನ ಲಾಲ್ರಿನೂಗ ಸ್ನಾಚ್ನಲ್ಲಿ 115 ಕೆಜಿ ಹಾಗೂ ಕ್ಲೀನ್-ಜರ್ಕ್ನಲ್ಲಿ 136 ಕೆಜಿ ತೂಕ ಸಹಿತ ಒಟ್ಟು 251 ಕೆಜಿ ಎತ್ತಿ ಹಿಡಿದರು. ಜಾಕಬ್ ವನ್ಲಾಲ್ಟ್ಲುಂಗಾ 247 ಕೆಜಿ ತೂಕ ಎತ್ತಿ ಹಿಡಿದು ಬೆಳ್ಳಿ ಜಯಿಸಿದರೆ, ಅಭಿಷೇಕ್ ಕಂಚಿನ ಪದಕ ಜಯಿಸಿದರು.
ಪುಣೆಯ ಆರ್ಮಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿರುವ ಜೆರೆಮಿ ಹಾಗೂ ಜಾಕಬ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಇಬ್ಬರು ಮಿರೊರಾಂನಲ್ಲಿ ಹುಟ್ಟಿ ಬೆಳೆದಿದ್ದಾರೆ.
Next Story