ನಟ ದಿಲೀಪ್ಗೆ ಹಿನ್ನಡೆ: ಕಿರುಕುಳ ದೃಶ್ಯಗಳ ಪ್ರತಿ ಕೊಡಲು ಸಾಧ್ಯವಿಲ್ಲ ಎಂದ ಕೋರ್ಟ್
ಕೊಚ್ಚಿ,ಡಿ.7: ನಟಿಗೆ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ಎರ್ನಾಕುಳಂ ಜಿಲ್ಲಾ ಸೆಶನ್ಸ್ ಕೋರ್ಟಿಗೆ ವರ್ಗಾಯಿಸಲಾಗಿದೆ. ನಟಿಗೆ ಕಿರುಕುಳ ನೀಡಿರುವ ಎನ್ನಲಾದ ದೃಶ್ಯಗಳ ಪ್ರತಿಯಬನ್ನು ನೀಡಬೇಕೆನ್ನುವ ದಿಲೀಪ್ಅರ್ಜಿಯನ್ನು ಅಂಗಮಾಲಿ ಕೋರ್ಟು ತಳ್ಳಿಹಾಕಿದೆ.
ಪ್ರಕರಣದ ದೃಶ್ಯಗಳ ಸಹಿತ ಪುರಾವೆಗಳು ಸಿಗಬೇಕೆಂದು ದಿಲೀಪ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆದರೆ ದಿಲೀಪ್ಗೆ ದೃಶ್ಯಗಳ ಪ್ರತಿಯನ್ನು ನೀಡಬಾರದೆಂದು ಪ್ರಾಸಿಕ್ಯೂಶನ್ ವಾದಿಸಿತ್ತು. ಪ್ರಕರಣ ನಡೆಸಲುಪುರಾವೆಗಳನ್ನು ಪಡೆಯುವ ಹಕ್ಕು ತನಗೆ ಇದೆ ಎಂದು ದಿಲೀಪ್ ಕೋರ್ಟ್ನಲ್ಲಿ ವಾದಿಸಿದ್ದರು.
ಸಾಕ್ಷಿಗಳ ಹೇಳಿಕೆ ಸಹಿತ ಸಿಸಿಟಿವಿ ದೃಶ್ಯಗಳು ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕಳೆದವಾರ ಕೋರ್ಟು ದಿಲೀಪ್ಗೆ ಹಸ್ತಾಂತರಿಸಿತ್ತು.
Next Story