ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾಧ್ಯಕ್ಷರಾಗಿ ಹಾಫಿಝ್ ಮುಈನ್ ರಝ್ವಿ ಪುನರಾಯ್ಕೆ

ಉಳ್ಳಾಲ,ಫೆ.7: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಆಝಾದ್ ನಗರ ಶಾಖೆಯ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಇತ್ತೀಚೆಗೆ ಉಳ್ಳಾಲದ ಆಝಾದ್ ನಗರದಲ್ಲಿರುವ ಇಸ್ಲಾಮಿಕ್ ನಾಲೆಜ್ ಸೆಂಟರ್ ನಲ್ಲಿ ಸೆಕ್ಟರ್ ಚುನಾವಣಾ ವೀಕ್ಷಕರಾದ ಹಂಝ ಸುಂದರ್ಬಾಗ್ ಮತ್ತು ಮುಝಮ್ಮಿಲ್ ಉಸ್ತಾದ್ ರವರ ನೇತತ್ವದಲ್ಲಿ ಶಾಖಾ ಉಪಾಧ್ಯಕ್ಷ ಲತೀಫ್ ರವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಸೆಕ್ಟರ್ ಅದ್ಯಕ್ಷ ಸಯ್ಯದ್ ಖುಬೈಬ್ ತಂಗಲ್ ರವರು ಸಂಘಟನೆಯ ಪಾವಿತ್ರತೆಯನ್ನು ವಿವರಿಸಿ ಮಾತಾನಾಡಿದರು. ನಂತರ ಹಾಶಿಮ್ ಮಾಸ್ತಿಕಟ್ಟೆಯವರು ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ವಾಚಿಸಿ ಸಬೆಯ ಸಮ್ಮತಿ ಮೇರೆಗೆ ಮಂಜೂರು ಮಾಡಲಾಯಿತು. ನಂತರ ಹೊಸ ಸಮಿತಿ ಆಯ್ಕೆಯು ಸರ್ವ ಸಮ್ಮತಿ ಮೇರೆಗೆ ಆರಿಸಲಾಯಿತು. ಅಧ್ಯಕ್ಷರಾಗಿ ಹಾಫೀಝ್ ಮುಈನುದ್ದೀನ್ ರಝಾ ಖಾದಿರಿ ಯರವರನ್ನು ಪುನರಾಯ್ಕೆ ಮಾಡಲಾಯಿತು ಉಪಾದ್ಯಕ್ಷರಾಗಿ ಹಾಫಿಲ್ ಸುಹೈಲ್ ಮತ್ತು ಲತೀಫ್,
ಪ್ರದಾನ ಕಾರ್ಯದರ್ಶಿಯಾಗಿ ಮುಝಫರ್ ಜೊತೆ ಕಾರ್ಯದರ್ಶಿಯಾಗಿ ಸೈಫುಲ್ಲಾ ಮತ್ತು ಫವಾಝ್ , ಕೋಶಾಧಿಕಾರಿಯಾಗಿ ಹಾಶಿಮ್ ಮಾಸ್ತಿಕಟ್ಟೆ ಹಾಗೂ ಹದಿನಾಲ್ಕು ಸದಸ್ಯರನ್ನೊಳಗೊಂಡ ಸಮಿತಿಯನ್ನು ಸಭೆಯ ಸಮ್ಮತಿಯೊಂದಿಗೆ ಆರಿಸಲಾಯಿತು. ಕಾರ್ಯಕ್ರಮದಲ್ಲಿ ಸೆಕ್ಟರ್ ಪ್ರದಾನ ಕಾರ್ಯದರ್ಶಿ ಮುಝಮಿಲ್ ಕೋಟೆಪುರ , ಅಹ್ ಸನ್ ಮುಕ್ಕಚೇರಿ ಮತ್ತಿತರರು ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಮುಜಾಫರ್ ಸ್ವಾಗತಿಸಿ ಕೋಶಾಧಿಕಾರಿ ಹಾಶಿಮ್ ವಂದಿಸಿದರು.





