ಮಹಿಳಾ ಏಕದಿನ ಕ್ರಿಕೆಟ್: 200 ವಿಕೆಟ್ ಪಡೆದ ಮೊದಲ ಆಟಗಾರ್ತಿಯಾಗಿ ಜೂಲನ್ ಗೋಸ್ವಾಮಿ

ಕಿಂಬೆರ್ಲಿ(ದ.ಆಫ್ರಿಕ), ಫೆ.7: ಭಾರತದ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿ 200 ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಬೌಲರ್ ಆಗಿ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಜೂಲನ್ ಗೋಸ್ವಾಮಿ ಅವರು ಆಫ್ರಿಕದ ಹದಿನೆಂಟರ ಹರೆಯದ ಆಟಗಾರ್ತಿ ಲೌರಾ ವೋಲ್ವಡ್ತ್ ವಿಕೆಟ್ ವಿಕೆಟ್ ಉಡಾಯಿಸುವ ಮೂಲಕ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಬಂಗಾಳದ 35ರ ಹರೆಯದ ವೇಗಿ ಗೋಸ್ವಾಮಿ ಅವರು ಮೇ 2017ರಲ್ಲಿ ಗರಿಷ್ಠ ವಿಕೆಟ್ ಸಾಧನೆ ಮಾಡಿದ್ದ ಆಸ್ಟ್ರೇಲಿಯದ ವೇಗಿ ಕ್ಯಾಥರಿನ್ ಫಿತ್ಝ್‌ಪ್ಯಾಟ್ರಿಕ್ ಅವರ ದಾಖಲೆಯನ್ನು ಮುರಿದಿದ್ದರು.ಕ್ಯಾಥರಿನ್ 109 ಪಂದ್ಯಗಳಲ್ಲಿ 180 ವಿಕೆಟ್ ಪಡೆದಿದ್ದರು.
ಜೂಲನ್ ಗೋಸ್ವಾಮಿ ಅವರು ಭಾರತವನ್ನು ಮಹಿಳಾ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು.
ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಿದೆ. ಭಾರತದ ಪರ ಸ್ಮತಿ ಮಂಧಾನ 3ನೇ ಶತಕ(135) , ಹರ್ಮನ್‌ಪ್ರೀತ್ ಕೌರ್(55) ಮತ್ತು ವೇದಾ ಕೃಷ್ಣಮೂರ್ತಿ(51) ಅರ್ಧಶತಕ ದಾಖಲಿಸಿ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಲು ನೆರವಾದರು.







