ಫೆ.10ರಿಂದ ‘ಕಾಲೇಜು ರಂಗೋತ್ಸವ’
ಉಡುಪಿ, ಫೆ.7: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ರಂಗಾಯಣ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಹಯೋಗದೊಂದಿಗೆ ‘ಕಾಲೇಜು ರಂಗೋತ್ಸವ’ ಉಡುಪಿ ಜಿಲ್ಲಾ ಮಟ್ಟದ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಯನ್ನು ಫೆ.10 ಮತ್ತು 11ರಂದು ಕಟಪಾಡಿ ಎಸ್‌ವಿಎಸ್ ಪದವಿಪೂರ್ವ ಕಾೇಜು ಸಭಾಂಗಣದಲ್ಲಿ ಆಯೋಜಿ ಸಲಾಗಿದೆ.
ಫೆ.11ರಂದು ಬೆಳಗ್ಗೆ 9ಗಂಟೆಗೆ ಕಾರ್ಯಕ್ರಮವನ್ನು ನಟ ಹಾಗೂ ನಿರ್ದೇಶಕ ರಾಜ್ ಬಿ.ಶೆಟ್ಟಿ ಉದ್ಘಾಟಿಸಲಿರುವರು. ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಬಾಸುಮ ಕೊಡಗು ಅಧ್ಯಕ್ಷತೆ ವಹಿಸಲಿರುವರು. ಬಳಿಕ ನಾಟಕ ಸ್ಪರ್ಧೆ ಜರಗಲಿದೆ. ಫೆ.10ರಂದು ಮಧ್ಯಾಹ್ನ 2ಗಂಟೆಯಿಂದ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





