ಹವಾಲ ನಿರ್ವಾಹಕನ ಬಂಧನ

ಹೊಸದಿಲ್ಲಿ, ಫೆ. 7: ಪಾಕಿಸ್ತಾನ ಮೂಲದ ಲಷ್ಕರ್ ಎತೊಯ್ಬಾ ಭಾರತದಲ್ಲಿ ನಡೆಸುತ್ತಿರುವ ಚಟುವಟಿಕೆಯ ತನಿಖೆಗೆ ಸಂಬಂಧಿಸಿ ಉತ್ತರಾಖಂಡದ ಹವಾಲ ನಿರ್ವಾಹಕನೆಂದು ಹೇಳಲಾದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಬಂಧಿತನನ್ನು ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ 5ನೇ ವ್ಯಕ್ತಿ ಈತ. ಸಮದ್‌ನನ್ನು ಮಂಗಳವಾರ ಹರಿದ್ವಾರದಿಂದ ಬಂಧಿಸಲಾಯಿತು. ಗುರುವಾರ ಹೊಸದಿಲ್ಲಿಗೆ ತರಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಹರಿದ್ವಾರದ ಬುಕ್ಕಾನ್‌ಪುರ ಗ್ರಾಮದ ನಿವಾಸಿಯಾಗಿ ರುವ ಸಮದ್‌ನನ್ನು ಮಂಗಳವಾರ ಸಂಬಂಧಿತ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು 6 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ರೂರ್ಕಿ, ದಿಯೋಬಂದ್ ಹಾಗೂ ಮುಝಾಫರ್‌ನಗರ ಪ್ರದೇಶದಲ್ಲಿ ಈತ ಪ್ರಮುಖ ಹವಾಲ ನಿರ್ವಾಹಕ ನಾಗಿದ್ದಾನೆ ಎಂದು ವಕ್ತಾರರು ತಿಳಿಸಿದ್ದಾರೆ.
Next Story





