ಹಲ್ಲೆ ಪ್ರಕರಣ: ನಾಲ್ವರ ಬಂಧನ
ಮಂಗಳೂರು, ಫೆ. 7: ನಗರದ ಕಂಕನಾಡಿ ಹೊಟೇಲೊಂದರ ಬಳಿ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಪ್ಪಿನಮೊಗರಿನ ನಿವಾಸಿಗಳಾದ ರಾಜಶೇಖರ, ಸಂತೋಷ್, ಚಂದ್ರಶೇಖರ, ಭವಾನಿ ಶಂಕರ್ ಬಂಧಿತ ಆರೋಪಿಗಳು.
ಫೆ.5ರಂದು ಕಣ್ಣೂರಿನ ಸತೀಶ ಅವರು ಕಂಕನಾಡಿಯ ಆಸ್ಪತ್ರೆವೊಂದಕ್ಕೆ ಬಂದಿದ್ದರು. ಊಟ ಮಾಡಲೆಂದು ಹೊಟೇಲ್‌ಗೆ ಆಗಮಿಸಿದಾಗ ಯುವಕರು ಜಗಳವಾಡಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸತೀಶ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





