ಭಟ್ಕಳ: ಝೇಂಕಾರ ಸಂಸ್ಥೆಯಿಂದ ನುಪುರೋತ್ಸವ ಚಿತ್ರಕಲಾ ಪ್ರದರ್ಶನ

ಭಟ್ಕಳ, ಫೆ. 7: ಭಟ್ಕಳದಲ್ಲಿ ಸಂಗೀತ, ನೃತ್ಯ ಕಲೆಯನ್ನು ಪೋಷಿಸಿ ಬೆಳೆಸುತ್ತಿರುವ ಝೇಂಕಾರ ಸಂಸ್ಥೆ ತಾಲ್ಲೂಕಿನ ಒಂದು ಹೆಮ್ಮೆಯ ಸಂಸ್ಥೆಯಾಗಿದ್ದು ಇನ್ನಷ್ಟು ಬೆಳೆಯಲಿ ಎಂದು ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ಅವರು ಝೇಂಕಾರ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಆಶ್ರಯದಲ್ಲಿ ಶಿರಾಲಿಯಲ್ಲಿ ಜರುಗಿದ ನೂಪುರೋತ್ಸವ ಕಾರ್ಯಕ್ರಮವ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ಅ್ಯಕ್ಷ ಅಶೋಕ ಪೈ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಮಾತನಾಡಿದ ಪುರಸಭಾ ಸದಸ್ಯ ಪದ್ಮನಾಭ ಪೈ ಝೇಂಕಾರ್ ಕಲಾ ಸಂಸ್ಥೆ ಯಾವುದೇ ವ್ಯಾವಹಾರಿಕ ಉದ್ದೇಶವಿಲ್ಲದೇ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.
ಉದ್ಯಮಿ ಡಿ.ಜೆ.ಕಾಮತ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು. ಮುಖ್ಯ ಅತಿಥಿಗಳಾದ ಅಳ್ವೆಕೋಡಿ ದುರ್ಗಾಪರಮೇಶ್ವರೀ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ಸಮಾಜ ಸೇವಕ ಡಾ. ಆರ್. ವಿ. ಸರಾಫ್, ಅತಿಥಿ ಕಿರಣ ಕಾಯ್ಕಿಣಿ ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದ ಸಂಗೀತ ಶಿಕ್ಷಕ ಅನಂತ ಹೆಬ್ಬಾರ ಹಾಗೂ ತಬಲಾ ವಾದಕ ಬಾಲಚಂದ್ರ ಹೆಬ್ಬಾರ ಇವರನ್ನು ಸನ್ಮಾಸಿ ಗೌರವಿ ಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದೂಷಿ ನಯನಾ ಪ್ರಸನ್ನ ಹಾಡುಗಾರಿಕೆಯಲ್ಲಿ ಭರತನಾಟ್ಯ ಕಾರ್ಯಕ್ರಮ, ವೆಂಕಟೇಶ ಭಟ್ ಶಿಷ್ಯರಿಂದ ಸಂಗೀತ ಕಾರ್ಯಕ್ರಮ ಜರುಗಿತು.







