ಫೆ. 9: ಕಂಕನಾಡಿಯಲ್ಲಿ ಸಲಫಿ ಸಮಾವೇಶ
ಮಂಗಳೂರು, ಫೆ. 7: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಕಂಕನಾಡಿ ಘಟಕದ ಆಶ್ರಯದಲ್ಲಿ ಫೆ.9 ರಂದು ಸಂಜೆ ಗಂಟೆ 4:30 ರಿಂದ ರಾತ್ರಿ 9:30 ರವರೆಗೆ ಕಂಕನಾಡಿ ಮಾರ್ಕೆಟ್ ಸಮೀಪದ ಸಲಫಿ ಸೆಂಟರ್‍ನ ವಠಾರದಲ್ಲಿ ಬೃಹತ್ ಸಲಫಿ ಸಮಾವೇಶವು ಜರಗಲಿದೆ.
ಸಲಫಿ ಮೂವ್‍ಮೆಂಟ್‍ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್ ಅವರು ಈ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಮತ್ತು ಪವಿತ್ರ ಸಂದೇಶ ಪತ್ರಿಕೆಯ ಸಂಪಾದಕ ಎಂ.ಜಿ. ಮುಹಮ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಎಸ್.ಕೆ.ಎಸ್.ಎಂ. ಕಂಕನಾಡಿ ಘಟಕದ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಂಕನಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





