ಬೆಂಗಳೂರು: ವಿ-ಗಾರ್ಡ್ ಹೊಸ ಲಾಂಛನ ಬಿಡುಗಡೆ
ಬೆಂಗಳೂರು, ಫೆ. 7: ಸಾಮಾನ್ಯ ಗ್ರಾಹಕರ ಜೀವನವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳನ್ನು ಯೋಜಿಸಿ ರೂಪಿಸುತ್ತಿದ್ದೇವೆ ಎಂದು ವಿ-ಗಾರ್ಡ್ ಇಂಡಸ್ಟ್ರೀಸ್ ಲಿ. ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಿಲಪಲ್ಲಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ವಿ-ಗಾರ್ಡ್ ಹೊಸ ಲಾಂಛನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಾವು ಕೇವಲ ಮುಂದಿನ ನಾವೀನ್ಯತೆಯನ್ನಷ್ಟೇ ಯೋಚಿಸುತ್ತಿಲ್ಲ. ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೂಲಕ ಮಾನವ ಜೀವನ ಮತ್ತು ಅವುಗಳ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದರು.
ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ತನ್ನ ಹೊಸ ಐಡೆಂಟಿಟಿಯನ್ನು ಅನಾವರಣಗೊಳಿಸಿದೆ ಮತ್ತು ಬ್ರಾಂಡ್‌ಗೆ ಹೊಸಗುರಿಯನ್ನು ಘೋಷಿಸಿದೆ. 40 ವರ್ಷದ ಕಂಪೆನಿ ಇತಿಹಾಸವನ್ನು ಹೊಸ ತಲೆಮಾರು, ತಂತ್ರಜ್ಞಾನ ಆಧರಿತ ಸ್ಮಾರ್ಟ್ ಸಂಸ್ಥೆಯನ್ನು ಹೊಸ ಐಡೆಂಟಿಟಿಯು ಸೂಚಿಸುತ್ತದೆ ಎಂದರು.
ಕಂಪೆನಿಯ ಸಿಇಓ ರಾಮಚಂದ್ರನ್ ಮಾತನಾಡಿ, ಕಂಪೆನಿ ಇಂದು ಆರೋಗ್ಯಕರ ಯೋಜನೆಯನ್ನು ರೂಪಿಸಿದೆ. ಈ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುವ ಸಂಭಾವ್ಯತೆಯನ್ನು ಇದು ಹೊಂದಿದೆ. ನಾವು ಈಗ ಮುಂದಿನ ತಲೆಮಾರಿನ ಬೆಳವಣಿಗೆಗೆ ಅಡಿಗಲ್ಲು ರೂಪಿಸಿದ್ದೇವೆ ಎಂದರು.







