ಶೇ.50ರಷ್ಟು ತಹಶೀಲ್ದಾರ್ ಹುದ್ದೆಗಳು ಖಾಲಿ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಫೆ.7: ಕಂದಾಯ ಇಲಾಖೆಯಲ್ಲಿ ಶೇ.50ರಷ್ಟು ತಹಶೀಲ್ದಾರ್ ಹುದ್ದೆಗಳು ಖಾಲಿಯಿದ್ದು, ಆದಷ್ಟು ಬೇಗ ಈ ಎಲ್ಲ ಖಾಲಿ ಹುದ್ದೆಗಳನ್ನು ನೇಮಕಗೊಳಿಸುವ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ರಮೇಶ್‌ಬಾಬು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್‌ಗಳ ಕೊರತೆಯಿದ್ದು, ಇದರಿಂದ, ಸಾಕಷ್ಟು ಕೆಲಸಗಳು ಹಾಗೆಯೇ ಬಾಕಿ ಉಳಿದಿವೆ. ಹೀಗಾಗಿ, ಆದಷ್ಟು ಬೇಗ ಈ ಎಲ್ಲ ಖಾಲಿ ಹುದ್ದೆಗಳನ್ನು ನೇಮಕಗೊಳಿಸುವ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.
ಒಟ್ಟು 32 ತಹಶೀಲ್ದಾರ್‌ಗಳ ವಿರುದ್ಧ ಲೋಕಾಯುಕ್ತ ಟ್ರಾಪ್, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಳಿ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ 10 ಪ್ರಕರಣಗಳಲ್ಲಿ ಅಭಿಯೋಜನಾ ಮಂಜೂರಾತಿಯನ್ನು ಈಗಾಲೇ ನೀಡಲಾಗಿದೆ ಎಂದು ಹೇಳಿದರು.
Next Story





