ಮೈಸೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಅಪಹರಣ
ಮೈಸೂರು,ಫೆ.7: ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಸರಗಳ್ಳನೊಬ್ಬ ಪರಾರಿಯಾಗಿದ್ದಾನೆ.
ನಗರದ ವಾಣಿ ವಿಲಾಸ ರಸ್ತೆಯ ನಿವಾಸಿ ಸದಾಶಿವಯ್ಯ ಎಂಬುವರ ಪತ್ನಿ ಸುವರ್ಣ (77) ಸರ ಕಳೆದುಕೊಂಡವರು.
ಗಿಡದಲ್ಲಿ ಹೂ ಕೀಳುತ್ತಿದ್ದ ವೇಳೆ ಬಂದ ಬೈಕ್ ಸವಾರ ಹೆಲ್ಮೆಟ್ ಧರಿಸಿಯೇ ಅವರ ಬಳಿ ಬಂದು ವಿಳಾಸ ಕೇಳುವಂತೆ ನಟಿಸಿದ್ದಾನೆ. ಬಳಿಕ ಅವರ ಕತ್ತಿನಲ್ಲಿದ್ದ 80ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Next Story





