ಎ.13 ರಿಂದ ಪಿಲಿಕುಳದಲ್ಲಿ ಮಕ್ಕಳ ಬೇಸಿಗೆ ಶಿಬಿರ
ಮಂಗಳೂರು, ಫೆ.8: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಎಪ್ರಿಲ್ 13 ರಿಂದ 22 ರವರೆಗೆ 3 ರಿಂದ 9ನೆ ತರಗತಿಯ ಮಕ್ಕಳಿಗೆ ‘ರಜಾ ಮಜಾ ಪಿಲಿಕುಳ ಬೇಸಿಗೆ ಶಿಬಿರ-2018’ ಕ್ರಿಯಾತ್ಮಕ ಶಿಬಿರ ಆಯೋಜಿಸಲಾಗಿದೆ.
ಮೈಮ್ ರಾಮ್‌ದಾಸ್ ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ ಮನೋರಂಜನಾ ಆಟಗಳು, ಸ್ವರ ವ್ಯಾಯಾಮ, ಕ್ರಿಯೇಟಿವ್ ಆರ್ಟ್, ರಂಗ ವ್ಯಾಯಾಮ, ಮುಖವಾಡ ರಚನೆ, ಅಭಿನಯ ಗೀತೆ, ಕ್ಲೇ ಮೋಡಲ್, ಮೈಮ್, ಮಿಮಿಕ್ರಿ, ಗೋಡೆ ಪತ್ರಿಕೆ, ಕಥೆ ರಚನೆ, ನಾಟಕ, ವರ್ಲಿ ಕಲೆ, ಹಾಡುಗಳು, ಕೊಲಾಜ್, ಗೊಂಬೆ ತಯಾರಿಕೆ, ಜಾದೂ, ಕ್ರಾಪ್ಟ್, ಪರಿಸರ ವೀಕ್ಷಣೆ ಮತ್ತು ಸಂರಕ್ಷಣೆ, ವಿಜ್ಞಾನ ಕೌತುಕದ ಜೊತೆಗೆ ಪಿಲಿಕುಳ ನಿಸರ್ಗಧಾಮದ ವಿವಿಧ ವಿಭಾಗಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಪಿಲಿಕುಳದ ಆಡಳಿತ ಕಚೇರಿಯನ್ನು (ಮೊ.ಸಂ: 7899687937) ಸಂಪರ್ಕಿಸಲು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





