ಉಳ್ಳಾಲ: ಕ್ಯಾನ್ಸರ್ ಬಗ್ಗೆ ಜಾಗೃತಿ ಕಾರ್ಯಕ್ರಮ

ಉಳ್ಳಾಲ, ಫೆ. 8: ಯೆನೆಪೊಯ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಸಮುದಾಯ ಡೆಂಟಿಸ್ಟ್ರಿ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಘಟಕದ ವತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವು ನಡೆಯಿತು.
ಯೆನೆಪೊಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಮ್. ವಿಜಯ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಬೀದಿನಾಟಕ, ಜಾಗೃತಿ ಚರ್ಚೆ, ಸ್ತನ ಗರ್ಭಕಂಠದ ಮತ್ತು ಮೌಖಿಕ ಕ್ಯಾನ್ಸರ್‌ಗಳ ಆರಂಭಿಕ ಪತ್ತೆ ಹಚ್ಚುವಿಕೆ ಮೊದಲಾದ ವಿಷಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಯೆನೆಪೊಯ ವಿಶ್ವವಿದ್ಯಾಲಯ ವೈದ್ಯಕೀಯ ಮತ್ತು ದಂತ ಕಾಲೇಜು, ಸುತ್ತಮುತ್ತಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಯೆನೆಪೊಯ ವಿಶ್ವವಿದ್ಯಾನಿಲಯದ ಡಾ.ಶ್ರೀಕುಮಾರ್ ಮೆನನ್ ಮತ್ತು ಡಾ. ಅಭಯ್ ನಿರ್ಗುಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಗುರುಪ್ರಸಾದ್, ಡಾ. ಅಶ್ವಿನಿ ಶೆಟ್ಟಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಮತ್ತು ಡಾ. ಇಮ್ರಾನ್ ಪಾಷಾ ಸ್ತನ ಕ್ಯಾನ್ಸರ್ ಮತ್ತು ಮೌಖಿಕ ಕ್ಯಾನ್ಸರ್‌ಗಳ ಆರಂಭಿಕ ಪತ್ತೆ ಹಚ್ಚುವಿಕೆಯ ಬಗ್ಗೆ ಮಾತಾನಾಡಿದರು.





