ಶೀಘ್ರವೇ 'ಪೆಟ್ ಸಿಟಿ ಸ್ಕಾನ್ ಯಂತ್ರ' ಖರೀದಿ: ಸರಕಾರದಿಂದ ಭರವಸೆ

ಬೆಂಗಳೂರು, ಫೆ.8: ಕ್ಯಾನ್ಸರ್ ಕಾಯಿಲೆಯ ವಿವಿಧ ಹಂತವನ್ನು ಗುರುತಿಸಲು ಸಾಧ್ಯವಾಗುವ ಅತ್ಯಾಧುನಿಕ ‘ಪೆಟ್ ಸಿಟಿ ಸ್ಕ್ಯಾನ್’ ಯಂತ್ರವನ್ನು ಶೀಘ್ರವೇ ಖರೀದಿಸಿ ನಗರದ ಕಿದ್ವಾಯಿ ಆಸ್ಪತ್ರೆಗೆ ಒದಗಿಸಲಾಗುವುದು ಎಂದು ಸರಕಾರ ವಿಧಾನಸಭೆಯಲ್ಲಿ ಭರವಸೆ ನೀಡಿದೆ.
ಗುರುವಾರ ವಿಧಾನಸಭೆ ಪ್ರಶ್ನೋತ್ರರ ಅವಧಿಯಲ್ಲಿ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಉತ್ತರ ನೀಡಿದ ಆಹಾರ ಸಚಿವ ಖಾದರ್, ಪೆಟ್ ಸಿಟಿ ಸ್ಕ್ಯಾನ್ ಯಂತ್ರ ಅತ್ಯಂತ ಸೂಕ್ಷ್ಮವಾಗಿದ್ದು, ಕ್ಯಾನ್ಸರ್ ಗೆಡ್ಡೆಯ ಜೈವಿಕ ಚಟುವಟಿಕೆಯನ್ನು ಪತ್ತೆಹಚ್ಚಲು, ರೋಗದ ನಿಖರತೆಯನ್ನು ನಿರ್ದಿಷ್ಟವಾಗಿ ಪತ್ತೆ ಹಚ್ಚಲು ನೆರವಾಗಲಿದೆ ಎಂದರು.
ಕ್ಯಾನ್ಸರ್ ಕಾಯಿಲೆಯ ನಿರ್ದಿಷ್ಟ ಮೌಲ್ಯಮಾಪನ ಮಾಡುವಲ್ಲಿ ಸಹಾಯಕವಾದ ಈ ಯಂತ್ರವನ್ನು 15ಕೋಟಿ ರೂ.ವೆಚ್ಚದಲ್ಲಿ ಖರೀದಿಸಲು 2018-19ನೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಲಾಗಿದೆ. ಶೀಘ್ರದಲ್ಲೇ ಯಂತ್ರ ಖರೀದಿಸಿ ಕಿದ್ವಾಯಿ ಆಸ್ಪತ್ರೆಗೆ ಒದಗಿಸಲಾಗುವುದು ಎಂದರು.
Next Story





