ತಾಜ್ ಮಹಲ್ ರಕ್ಷಣೆಗೆ ‘ವಿಷನ್ ಡಾಕ್ಯುಮೆಂಟ್’ ದಾಖಲಿಸಿ
ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶ

ಹೊಸದಿಲ್ಲಿ, ಫೆ. 8: ತಾಜ್‌ಮಹಲ್ ಸಂರಕ್ಷಣೆಗೆ ನಾಲ್ಕು ವಾರಗಳ ಒಳಗೆ ‘ವಿಶನ್ ಡಾಕ್ಯುಮೆಂಟ್’ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.
ತಾಜ್ ಮಹಲ್, ತಾಚ್ ತ್ರಾಪೇಝಿಯಂ ವಲಯ (ಟಿಟಿಝಡ್)ದಲ್ಲಿ ಹಾಗೂ ಸುತ್ತಮುತ್ತ ಇದ್ದಕ್ಕಿದ್ದಂತೆ ತೀವ್ರವಾಗಿ ಚಟುವಟಿಕೆಗಳು ಯಾಕೆ ನಡೆದವು ಹಾಗೂ ಅಲ್ಲಿ ಚರ್ಮ ಕೈಗಾರಿಕೆ ೆ ಹಾಗೂ ಹೋಟೆಲ್‌ಗಳು ಹೇಗೆ ಬಂದವು ಎಂಬುದರ ಬಗ್ಗೆ ವಿವರಣೆ ನೀಡುವಂತೆ ಕೂಡ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಟಿಟಿಝಢ್ ರಾಜಸ್ಥಾನದ ಭಾರತ್‌ಪುರ ಹಾಗೂ ಉತ್ತರಪ್ರದೇಶದ ಆಗ್ರಾ, ಫಿರೋಝಾಬಾದ್, ಮಥುರಾ, ಹಥ್ರಾಸ್, ಏತಾಹ್ ಜಿಲ್ಲೆಗಳಲ್ಲಿ 10,400 ಚದರ ಅಡಿ ಪ್ರದೇಶದಲ್ಲಿ ಹಬ್ಬಿಕೊಂಡಿದೆ.
ನಾಲ್ಕು ವಾರಗಳ ಒಳಗೆ ‘ವಿಷನ್ ಡಾಕ್ಯುಮೆಂಟ್’ ಸಲ್ಲಿಸಿ ಎಂದು ನ್ಯಾಯಮೂರ್ತಿ ಎಂ.ಬಿ. ಲೋಕುರು ಹಾಗೂ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.
ಈ ನಡುವೆ ರಾಜ್ಯ ಸರಕಾರ ಆಗ್ರಾ ನಗರದಲ್ಲಿ ನೀರು ಸರಬರಾಜು ಮಾಡಲು ಪೈಪ್ ಲೈನ್‌ಗಳನ್ನು ಅಲವಡಿಸಲು 234 ಮರಗಳನ್ನು ಕಡಿಯಲು ಅವಕಾಶ ನೀಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದೆ.





