ಶೀರೂರು ಶ್ರೀಗಳ ಕಾರಿಗೆ ಸ್ಕಾರ್ಪಿಯೋ ಢಿಕ್ಕಿ
ಹಿರಿಯಡ್ಕ, ಫೆ.8: ಶೀರೂರು ಮಠದಿಂದ ಹಿರಿಯಡ್ಕ ಕಡೆಗೆ ಬರುತ್ತಿದ್ದ ಶೀರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮಿ ಅವರ ಕಾರಿಗೆ ಮಠದ ದ್ವಾರದ ಬಳಿ ಸ್ಕಾರ್ಪಿಯೋ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಶ್ರೀಗಳ ಕಾರು ಜಖಂ ಗೊಂಡಿದೆ.
ಶ್ರೀಗಳ ವಾಹನ ಚಾಲಕ ಪ್ರಸಾದ್ ಬುಧವಾರ ರಾತ್ರಿ 12:30ರ ಸುಮಾರಿಗೆ ಶೀರೂರು ಮಠದಿಂದ ಹಿರಿಯಡ್ಕ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಹರಿಖಂಡಿಗೆಯಿಂದ ಹಿರಿಯಡ್ಕದತ್ತ ಹೋಗುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರು ಶ್ರೀ ಅವರ ಕಾರಿನ ಬಲಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಕಾರು ಚಾಲಕ ತನ್ನ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಪರಾರಿಯಾದ ಕಾರು ದನದ ಕಳ್ಳ ಸಾಗಾಣಿಕೆಗೆ ಬಳಸಿರುವುದಾಗಿ ಶ್ರೀಗಳ ಕಾರು ಚಾಲಕ ಪ್ರಸಾದ್ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





