ಉಡುಪಿ: ಫೆ. 9ರಂದು ಎಸ್ಪಿಯಿಂದ ಫೋನ್-ಇನ್ ಕಾರ್ಯಕ್ರಮ
ಉಡುಪಿ, ಫೆ.8: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಡೆಸುವ ಸಾರ್ವಜನಿಕರೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮ ಫೆ.9ರಂದು ಬೆಳಗ್ಗೆ 10ರಿಂದ 11ಗಂಟೆಯವರೆಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಯಲಿದೆ.
ಸಾರ್ವಜನಿಕರು ಈ ಸ್ಥಿರ ದೂರವಾಣಿ ಸಂಖ್ಯೆ: 0820-2534777ಗೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು, ಪೊಲೀಸ್ ಇಲಾಖಾ ಕರ್ತವ್ಯಕ್ಕೆ ಸಂಬಂಧಪಟ್ಟ ದೂರು, ಅಕ್ರಮ ಚಟುವಟಿಕೆ, ಸಲಹೆಗಳನ್ನು ನೇರವಾಗಿ ಎಸ್ಪಿಯವರ ಬಳಿ ಹೇಳಿಕೊಳ್ಳಬಹುದು. ಕರೆ ಮಾಡಿದವರ ವಿವರವನ್ನು ಗುಪ್ತವಾಗಿ ಇಡಲಾಗುತ್ತದೆ ಎಂದು ಎಸ್ಪಿಯವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





