ಫೆ. 11ರಂದು ವಿವಿ ಸಂಧ್ಯಾ ಕಾಲೇಜಿನ ರಕ್ಷಕ - ಶಿಕ್ಷಕ ಸಂಘದ ಸಭೆ
ಮಂಗಳೂರು, ಫೆ. 8: ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಸಭೆ ಫೆ. 11ರಂದು ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ್ ಭಟ್ ವಿದ್ಯಾರ್ಥಿಗಳ ಪೋಷಕರನ್ನು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಘದ ಅಧ್ಯಕ್ಷ ಶಿವಮೂರ್ತಿ ಹೋಟ್ಕರ್ ಸಭೆಯ ಅಧ್ಯಕ್ಷತೆ ವಹಿಸಲಿರುವರು.
ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಬಗೆಗಿನ ಆಸಕ್ತಿ, ವೃತ್ತಿ ಮಾರ್ಗದರ್ಶನ, ತರಗತಿಗಳಿಗೆ ಹಾಜರಾತಿ, ಪರೀಕ್ಷೆ ಬರೆಯುವಲ್ಲಿನ ಸಮಸ್ಯೆಗಳು, ನಿರೀಕ್ಷಿತ ಫಲಿತಾಂಶ, ಮಾಹಿತಿ ಕೊರತೆ, ಸಹಕಾರಿ ಕಾಯ್ದೆಯಡಿಯಲ್ಲಿ ಸಂಘದ ನೊಂದಣಿ ಇಂತಹ ಹಲವು ವಿಷಯಗಳ ಬಗ್ಗೆ ವಿಚಾರ ನಿಮಯ ಹಾಗೂ ಪರಿಹಾರೋಪಾಯಗಳನ್ನು ಹುಡುಕುವುದು ಈ ಸಭೆಯ ಉದ್ದೇಶವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಣಿ ಶ್ರೀವತ್ಸ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





