Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. “ರೊಹಿಂಗ್ಯನ್ನರನ್ನು ಕೊಂದು ಒಂದೇ...

“ರೊಹಿಂಗ್ಯನ್ನರನ್ನು ಕೊಂದು ಒಂದೇ ಗುಂಡಿಯಲ್ಲಿ ಹೂತೆವು”

ಮ್ಯಾನ್ಮಾರ್ ಸೈನಿಕರ, ಬೌದ್ಧ ಗ್ರಾಮಸ್ಥರ, ಕ್ರೌರ್ಯ ತೆರೆದಿಟ್ಟ ‘ರಾಯ್ಟರ್ಸ್’

ವಾರ್ತಾಭಾರತಿವಾರ್ತಾಭಾರತಿ9 Feb 2018 9:45 PM IST
share
“ರೊಹಿಂಗ್ಯನ್ನರನ್ನು ಕೊಂದು ಒಂದೇ ಗುಂಡಿಯಲ್ಲಿ ಹೂತೆವು”

ಇನ್ನ್ ಡಿನ್ (ಮ್ಯಾನ್ಮಾರ್), ಫೆ. 9: ಕಳೆದ ವರ್ಷ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭುಗಿಲೆದ್ದ ಹಿಂಸಾಚಾರದ ವೇಳೆ ಇನ್ನ್ ದಿನ್ ಗ್ರಾಮದಲ್ಲಿ ಬೌದ್ಧರು ಮತ್ತು ಮ್ಯಾನ್ಮಾರ್ ಸೈನಿಕರು ನಡೆಸಿದ ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೆಪ್ಟಂಬರ್ 2ರ ಬೆಳಗ್ಗೆ 10 ರೊಹಿಂಗ್ಯಾ ಮುಸ್ಲಿಮರನ್ನು ಜೊತೆಯಾಗಿ ಬಂಧಿಸಿಡಲಾಗಿತ್ತು. ತಮ್ಮ ಬೌದ್ಧ ನೆರೆಕರೆಯವರು ಗುಂಡಿ ತೋಡುವುದನ್ನು ಅವರು ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಎಲ್ಲಾ 10 ರೊಹಿಂಗ್ಯಾ ಮುಸ್ಲಿಮರು ಶವವಾಗಿದ್ದರು. ಅವರಲ್ಲಿ ಕನಿಷ್ಠ ಇಬ್ಬರನ್ನು ಬೌದ್ಧ ಗ್ರಾಮಸ್ಥರು ಹೊಡೆದು ಕೊಂದಿದ್ದರು. ಉಳಿದವರನ್ನು ಮ್ಯಾನ್ಮಾರ್ ಸೈನಿಕರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಗುಂಡಿ ತೋಡಿದವರ ಪೈಕಿ ಇಬ್ಬರು ಹೇಳಿದ್ದಾರೆ.

‘‘10 ಜನರಿಗೆ ಒಂದು ಗುಂಡಿ’’ ಎಂದು ಇನ್ನ್ ದಿನ್ ಗ್ರಾಮದ ಬೌದ್ಧ ಸಮುದಾಯದ ನಿವೃತ್ತ ಸೈನಿಕ 55 ವರ್ಷದ ಸೋ ಚೇ ಹೇಳುತ್ತಾನೆ. ಗುಂಡಿ ತೋಡಲು ತಾನು ಸಹಾಯ ಮಾಡಿದೆ ಹಾಗೂ ಹತ್ಯೆಯ ಮೇಲುಸ್ತುವಾರಿ ವಹಿಸಿದೆ ಎಂದು ಅವನು ಹೇಳುತ್ತಾನೆ.

ಸೈನಿಕರು ಪ್ರತಿಯೊಬ್ಬ ರೊಹಿಂಗ್ಯಾ ಮುಸ್ಲಿಮ್‌ಗೆ 2 ಅಥವಾ 3 ಗುಂಡುಗಳನ್ನು ಹಾರಿಸಿದರು ಎಂದು ಅವನು ಹೇಳಿದನು. ‘‘ಅವರನ್ನು ಹೂಳುವಾಗ ಕೆಲವರು ಇನ್ನೂ ಸದ್ದು ಮಾಡುತ್ತಿದ್ದರು. ಇತರರು ಅದಾಗಲೇ ಸತ್ತಿದ್ದರು’’ ಎಂದವನು ತಿಳಿಸಿದ್ದಾನೆ.

ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ಆರಂಭಗೊಂಡ ಹಿಂಸಾಚಾರದ ಬಳಿಕ, ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಅಕ್ಟೋಬರ್ ವೇಳೆಗೆ, ಇನ್ನ್ ದಿನ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸುಮಾರು 6,000 ರೊಹಿಂಗ್ಯಾ ಮುಸ್ಲಿಮರ ಪೈಕಿ ಯಾರೊಬ್ಬರೂ ಗ್ರಾಮದಲ್ಲಿ ಇರಲಿಲ್ಲ.

ಬೌದ್ಧ ಗ್ರಾಮಸ್ಥರೇ ನೀಡಿದ ವಿವರಗಳು

ಈವರೆಗೆ ರಖೈನ್ ರಾಜ್ಯದಲ್ಲಿ ನಡೆದ ಹಿಂಸಾಚಾರ ಕುರಿತ ವಿವರಗಳನ್ನು ಸಂತ್ರಸ್ತರು ನೀಡುತ್ತಿದ್ದರು. ಈಗ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯು ಬೌದ್ಧ ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆಗಳ ಆಧಾರದಲ್ಲಿ ಅಲ್ಲಿ ನಡೆದ ಹತ್ಯಾಕಾಂಡದ ವಿವರಗಳನ್ನು ಸಂಗ್ರಹಿಸುತ್ತಿದೆ.

ರೊಹಿಂಗ್ಯಾ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿರುವುದು, ಅವರನ್ನು ಕೊಂದು ಹಾಕಿರುವುದು ಹಾಗೂ ಅವರ ದೇಹಗಳನ್ನು ಹೂತು ಹಾಕಿರುವುದನ್ನು ಬೌದ್ಧ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.

 ರೊಹಿಂಗ್ಯಾ ಹತ್ಯಾಕಾಂಡದಲ್ಲಿ ಸೈನಿಕರು ಮತ್ತು ಅರೆ ಸೈನಿಕ ಪಡೆಗಳು ಶಾಮೀಲಾಗಿರುವುದನ್ನು ಭದ್ರತಾ ಸಿಬ್ಬಂದಿಯೇ ‘ರಾಯ್ಟರ್ಸ್’ ಜೊತೆ ಹೇಳಿಕೊಂಡಿದ್ದಾರೆ.

3 ಚಿತ್ರಗಳು ತೆರೆದಿಟ್ಟ ಹತ್ಯಾಕಾಂಡ

ಇನ್ನ್ ದಿನ್‌ನಲ್ಲಿ ನಡೆದ 10 ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಸಂಬಂಧಿಸಿದ ಚಿತ್ರಗಳನ್ನು ಗ್ರಾಮದ ಬೌದ್ಧ ಸಮುದಾಯದ ಹಿರಿಯರೊಬ್ಬರು ‘ರಾಯ್ಟರ್ಸ್’ಗೆ ನೀಡಿದ್ದಾರೆ.

ಸೆಪ್ಟಂಬರ್ 1ರ ಸಂಜೆ ಈ 10 ರೊಹಿಂಗ್ಯಾಗಳನ್ನು ಸೈನಿಕರು ಬಂಧಿಸಿರುವುದರಿಂದ ಹಿಡಿದು ಸೆಪ್ಟಂಬರ್ 2ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ಅವರನ್ನು ಹತ್ಯೆ ಮಾಡುವವರೆಗಿನ ಹಲವು ಮಹತ್ವದ ಕ್ಷಣಗಳನ್ನು ಈ ಮೂರು ಚಿತ್ರಗಳು ಸೆರೆಹಿಡಿದಿವೆ.

ಈ ಚಿತ್ರಗಳನ್ನು ಈಗ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಅವರ ಕುಟುಂಬ ಸದಸ್ಯರಿಗೆ ತೋರಿಸಿದಾಗ ಅವರು ತಮ್ಮವರನ್ನು ಗುರುತುಹಿಡಿದಿದ್ದಾರೆ.

ಮೃತ ವ್ಯಕ್ತಿಗಳಲ್ಲಿ ಮೀನುಗಾರರು ಮತ್ತು ವ್ಯಾಪಾರಿಗಳಿದ್ದರು. ಅವರ ಪೈಕಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳಾಗಿದ್ದರು ಹಾಗೂ ಓರ್ವ ಇಸ್ಲಾಮಿಕ್ ಧರ್ಮ ಗುರುವಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X