ಮಲ್ಪೆಬೀಚ್: ಮೃತದೇಹ ಪತ್ತೆ
ಮಲ್ಪೆ, ಫೆ.9: ಮಲ್ಪೆಬೀಚ್ ಸಮೀಪದ ಸಮುದ್ರದ ನೀರಿನಲ್ಲಿ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಇಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಮೃತರ ಕೂದಲು ಹಾಗೂ ಗಡ್ಡ ಹಣ್ಣಾಗಿದ್ದು, ಬಿಳಿ ಪಂಚೆ, ನೀಲಿ, ಬಿಳಿ, ಕೆಂಪು ಬಣ್ಣದ ಗೆರೆಗಳಿರುವ ಅರ್ಧ ತೋಳಿನ ಶರ್ಟನ್ನು ಹಾಗೂ ಜನಿವಾರವನ್ನು ಧರಿಸಿದ್ದಾರೆ. ಬಲ ಕೈಗೆ ಕಪ್ಪುದಾರವನ್ನು ಕಟ್ಟಿದ್ದಾರೆ. ಅವರು ಸಮುದ್ರದ ನೀರಿಗೆ ಬಿದ್ದು ಮೃತಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





