ಮಲ್ಪೆ ಉದ್ಯಮಿಗಳ ಮನೆ, ಕಚೇರಿಗೆ ಐಟಿ ದಾಳಿ
ಮಲ್ಪೆ, ಫೆ.9: ಮಲ್ಪೆ ಮತ್ತು ಕೋಡಿಬೆಂಗ್ರೆಯ ಮೀನು ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ದೆಹಲಿಯ ಆದಾಯ ತೆರಿಗೆ ಅಧಿತಕಾರಿಗಳ ತಂಡ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಫೆ.8ರಂದು ಬೆಳಗ್ಗೆ 6ಗಂಟೆಗೆ ಒಟ್ಟು ನಾಲ್ವರು ಉದ್ಯಮಿಗಳ ಮನೆ, ಮಲ್ಪೆಯಲ್ಲಿರುವ ಅವರ ಮೂರು ಕಚೇರಿಯಲ್ಲಿ ತೀವ್ರ ಶೋಧ ನಡೆಸಿರುವ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಅದೇ ರೀತಿ ಕೋಡಿಬೆಂಗ್ರೆಯಲ್ಲಿರುವ ಉದ್ಯಮಿಯೊಬ್ಬರ ಮನೆಗೂ ದಾಳಿ ನಡೆಸಿರುವ ಕುರಿತು ಮಾಹಿತಿ ತಿಳಿದುಬಂದಿದೆ. ಗುಜ್ಜರಬೆಟ್ಟುವಿನಲ್ಲಿರುವ ಅವರ ಶೆಡ್‌ಗೂ ದಾಳಿ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಈ ಎಲ್ಲ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ.
Next Story





