ಫೆ. 11ರಂದು ಬಿಜೆಪಿ ಮಲಯಾಳಿ ಸಮಿತಿಯಿಂದ ‘ಸಂಗಮ 2018’
ಮಂಗಳೂರು, ಫೆ.9: ನಗರ ದಕ್ಷಿಣ ಬಿಜೆಪಿ ಮಲಯಾಳಿ ಸಮಿತಿ ವತಿಯಿಂದ ಫೆ. 11ರಂದು ಸಂಗಮ 2018 ಕಾರ್ಯಕ್ರಮವನ್ನು ಟಿ.ವಿ. ರಮಣ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ ಎಂದು ಮಂಡಲ ಅಧ್ಯ್ಷ ವೇದವ್ಯಾಸ್ ಕಾಮತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಅಂದು ಬೆಳಗ್ಗೆ 10.30ಕ್ಕೆ ಖ್ಯಾತ ಚಿತ್ರ ನಟ ಹಾಗೂ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಕಾರ್ಯಕ್ರುಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಕೇರಳ ಬಿಜೆಪಿಯ ಮಾಜಿ ಅಧ್ಯಕ್ಷ ವಿ. ಮುರಳೀಧರನ್ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ನಡೆದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಮಧ್ಯಾಹ್ನ ನಂತರ ಮಾಸ್ಟರ್ ಬಾಲಕೃಷ್ಣ ಮಂಜೇಶ್ವರ್ ಅವರ ಶಿಷ್ಯ ವೃಂದದಿಂದ ‘ನಾಟ್ಯ ದೀಪಂ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಕೇರಳದಿಂದ ಮಂಗಳೂರಿಗೆ ಬಂದು ಉದ್ಯೋಗ ಹಾಗೂ ವ್ಯಾಪಾರಗಳನ್ನು ನಡೆಸಿಕೊಂಡು ಮಂಗಳೂರಿನಲ್ಲಿ ನೆಲೆಸಿರುವವರಿಗಾಗಿ ಬಿಜೆಪಿ ಪಕ್ಷದಿಂದ ವಾರ್ಡ್ ಮಟ್ಟದಲ್ಲಿ ಮಲಯಾಳಿ ಸೆಲ್ ರಚಿಸಲಾಗಿದೆ. ಆ ಕಾರ್ಯಕರ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಮಲಯಾಳಿ ಸೆಲ್‌ನ ಸಂಚಾಲಕ ಪ್ರದೀಪ್ ಕುಮಾರ್, ಸಂತೋಷ್ ಶೆಣೈ, ಪವಿತ್ರ ಕುಮಾರಂ, ದಿನೇಶ್ ಎಂ., ಮಣಿಕಂಠನ್, ಗಿರೀಶ್ ಕೊಟ್ಟಾರಿ, ರಮೇಶ್ ಮೊದಲಾದವರು ಉಪಸ್ಥಿತರಿದ್ದರು.





