ಬೆಂಗಳೂರು: ಫೆ.14 ರಂದು ಪ್ರಶಸ್ತಿ ಪ್ರದಾನ
ಬೆಂಗಳೂರು, ಫೆ.9: ಪಾರಮಾರ್ಥ ಅಧ್ವೈತ ಆಧ್ಯಾತ್ಮ ಸಿದ್ದಿ ಮಹಾವಿದ್ಯಾಲಯ ಕೇಂದ್ರದ ವತಿಯಿಂದ ಹಿರಿಯ ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿಗೆ ಜೀವನ ಸಾಧನಾ ಪ್ರಶಸ್ತಿ ಸೇರಿದಂತೆ ಹಲವರಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆ. 14 ರಂದು ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಸಂಸ್ಥಾಪಕ ಕಿರಣ್, ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಶಾಂತಿ ಸೌಹಾರ್ದ ಪ್ರಶಸ್ತಿಯನ್ನು ರೇಣುಕಾನಂದ ಸ್ವಾಮೀಜಿ, ಸಾಧಕ ರತ್ನ ಪ್ರಶಸ್ತಿಯನ್ನು ಬಸವಾನಂದ ಸ್ವಾಮೀಜಿ, ಪ್ರಾಮಾಣಿಕ ರತ್ನ ಪ್ರಶಸ್ತಿಯನ್ನು ಡಿ.ಕೆ.ರವಿಗೆ ಮರಣೋತ್ತರವಾಗಿ, ಅರಳುವ ಪ್ರತಿಭೆ ಪ್ರಶಸ್ತಿಯನ್ನು ಯತಿನ್, ಸರ್ವೀಸ್ ಇನ್ ಯಕ್ಷನ್ ಪ್ರಶಸ್ತಿಯನ್ನು ಎ.ಎಸ್.ಪಾಟೀಲ್‌ಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಯರ್ ಸಂಪತ್‌ರಾಜ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಪಾಲಿಕೆ ಸದಸ್ಯೆ ಶೋಭಗೌಡ, ಮಾಜಿ ಪಾಲಿಕೆ ಸದಸ್ಯ ಎ.ಎಸ್.ಬಸವರಾಜ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.





