ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಉಪಾಧ್ಯಕ್ಷರಾಗಿ ಕುವೇಂಡ ವೈ.ಆಲಿ ನೇಮಕ
ಪೊನ್ನಂಪೇಟೆ,ಫೆ.10: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ, ಕೊಟ್ಟೋಳಿ ಗುಂಡಿಕೆರೆಯವರಾದ ಕುವೇಂಡ ವೈ.ಆಲಿ ಅವರನ್ನು ಇದೀಗ ನೇಮಕಗೊಳಿಸಲಾಗಿದೆ.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೆ. ಅಬ್ದುಲ್ ಸಲಾಂ ಮತ್ತು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಕೆ.ಎ. ಯಾಕೂಬ್ ಅವರ ಶಿಪಾರಸ್ಸಿನ ಮೇರೆಗೆ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಸೈಯದ್ ಅಹಮದ್ ಅವರು ಈ ನೇಮಕ ಆದೇಶವನ್ನು ಹೊರಡಿಸಿದ್ದಾರೆ.
ಪಕ್ಷದ ವಿವಿಧ ಘಟಕಗಳಲ್ಲಿ ಪದಾಧಿಕಾರಿಯಾಗಿದ್ದ ಕುವೇಂಡ ವೈ.ಆಲಿ ಅವರು ಈ ಹಿಂದೆ ಕದನೂರು ಕ್ಷೇತ್ರದ ವಿರಾಜಪೇಟೆ ತಾಲೂಕು ಪಂಚಾಯತ್್ ಸದಸ್ಯರಾಗಿ, ಇದಕ್ಕೂ ಮೊದಲು ಕೆದಮುಳ್ಳೂರು ಗ್ರಾ.ಪಂ. ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
Next Story





