Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸಂತತ್ವದ ಸಂದೇಶ ಸಾರುವ 'ಫುರ್ದತ್...

ಸಂತತ್ವದ ಸಂದೇಶ ಸಾರುವ 'ಫುರ್ದತ್ ಶಿಮಾಲ್'

ಇಸ್ಮತ್ ಪಜೀರ್ಇಸ್ಮತ್ ಪಜೀರ್10 Feb 2018 6:42 PM IST
share
ಸಂತತ್ವದ ಸಂದೇಶ ಸಾರುವ ಫುರ್ದತ್ ಶಿಮಾಲ್

ಚಿತ್ರದ ಕೊನೆಯಲ್ಲಿ ಪರದೆಯ ಮೇಲೆ ("Based on a situation of Gandhi's life")ಎಂಬ ಬರಹ ಮೂಡುತ್ತದೆ. ಗಾಂಧಿಯ ಹೋರಾಟದ ಬದುಕು ಪ್ರಾರಂಭವಾಗುವುದೂ ರೈಲಿನ ಮೂಲಕ. ರೈಲಿನಿಂದ ವರ್ಣಭೇದದ ಕಾರಣಕ್ಕೆ ಹೊರತಳ್ಳಲ್ಪಡದಿದ್ದರೆ ಗಾಂಧಿ ಎಂಬ ಹೋರಾಟಗಾರ ಹುಟ್ಟುತ್ತಿರಲಿಲ್ಲ. ಗಾಂಧಿಯ ಬದುಕಿನ ಘಟನೆಯೊಂದರ ಆಧಾರಿತ ಎನ್ನಬೇಕಾದರೆ ಆಕೆ ಖಂಡಿತವಾಗಿಯೂ ಗಾಂಧಿಯನ್ನು ಓದಿರುತ್ತಾಳೆ. ಗಾಂಧಿಯ ಬಗ್ಗೆ ಇಂದಿಗೂ ಜಗತ್ತು ಹೆಮ್ಮೆಪಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

ಫುರ್ದತ್ ಶಿಮಾಲ್ (ದಿ ಅದರ್ ಪೇರ್) ಅರ್ಥಾತ್ ಇನ್ನೊಂದು ಜೊತೆ. ಇದು ಈ ಬಾರಿಯ ಲಕ್ಸರ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ವಿಜೇತ ಈಜಿಪ್ಟಿಯನ್ ಕಿರುಚಿತ್ರ. ನಾಲ್ಕೂವರೆ ನಿಮಿಷಗಳ ಕಿರುಚಿತ್ರದ ನಿರ್ಮಾಪಕಿ ಇಪ್ಪತ್ತರ ಹರೆಯದ ಸಾರಾ ರೋಝಿಕ್. ಜಾಗತೀಕರಣದ ವಿಷವರ್ತುಲದಲ್ಲಿ ಸಿಲುಕಿ ಮಾನವೀಯತೆ, ಉಪಕಾರ ಗುಣ ಸಾಯುತ್ತಿರುವ ಇಂದಿನ ಕೇಡುಗಾಲದಲ್ಲಿ ನಿಷ್ಕಲ್ಮಶ ಮನಸ್ಸು ಎಂದರೇನು ಎಂಬುದನ್ನು ಸಮರ್ಥವಾಗಿ ಬಿಂಬಿಸುವ ಚಿತ್ರ ‘ಫುರ್ದತ್ ಶಿಮಾಲ್’.

ಬಡ ಬಾಲಕನೊಬ್ಬ ಔಷಧಿಗಳ ಪೊಟ್ಟಣದೊಂದಿಗೆ ರೈಲ್ವೆ ಫ್ಲಾಟ್ ಫಾರಂನಲ್ಲಿ ನಡೆದುಕೊಂಡು ಬರುತ್ತಿರುವಾಗ ಅವಸಾನದಂಚಿಗೆ ತಲುಪಿದ ಆತನ ಚಪ್ಪಲಿ ಕಡಿಯುತ್ತದೆ. ಆತ ಅದನ್ನು ಸರಿಪಡಿಸಲು ಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ... ಜನರು ನಡೆದಾಡುವ ಫ್ಲಾಟ್ ಫಾರಂ, ಆದುದರಿಂದ ಸಹಜವಾಗಿಯೇ ಜನಜಂಗುಳಿಯಿರುತ್ತದೆ. ಆತ ಆ ಕಿತ್ತುಹೋದ ಚಪ್ಪಲಿ ಎತ್ತಿಕೊಂಡು ತುಸುದೂರ ಹೋಗಿ ಕಲ್ಲೊಂದರ ಮೇಲೆ ಕೂತು ತನ್ನ ಚಪ್ಪಲಿಯನ್ನು ರಿಪೇರಿ ಮಾಡಲು ಶತಪ್ರಯತ್ನ ಮಾಡಿ ಸೋಲುತ್ತಾನೆ. ಸೋತು ಪ್ರಯತ್ನ ಕೈಬಿಟ್ಟು ನಿರಾಶೆಯಿಂದ ಕೂತಾಗ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಬೂಟು ಧರಿಸಿದ ಶಾಲಾ ಹುಡುಗನೊಬ್ಬ ತನ್ನ ತಂದೆಯೊಂದಿಗೆ ರೈಲು ನಿಲ್ದಾಣಕ್ಕೆ ಬರುತ್ತಾನೆ. ಆಗಷ್ಟೇ ಪಾಲಿಶ್ ಮಾಡಿದ ಬೂಟುಗಳನ್ನು ಆ ಶಾಲಾಬಾಲಕ ಆಗಾಗ ತನ್ನ ಕೈವಸ್ತ್ರದಿಂದ ಒರೆಸುತ್ತಿರುತ್ತಾನೆ. ಆತ ತನ್ನ ತಂದೆಯೊಂದಿಗೆ ನಿಲ್ದಾಣದ ಆಸನದ ಮೇಲೆ ಕೂರುತ್ತಾನೆ. ಬಡಬಾಲಕ ಆಸೆಯ ಕಣ್ಣುಗಳಿಂದ ಶಾಲಾಬಾಲಕನ ಶೂಗಳನ್ನು ತದೇಕಚಿತ್ತದಿಂದ ನೋಡುತ್ತಾನೆ. ರೈಲು ಫ್ಲ್ಯಾಟ್ ಫಾರಮ್ ತಲುಪುತ್ತದೆ. ರೈಲಿಗಾಗಿ ಕಾಯುತ್ತಿರುವವರೆಲ್ಲಾ ಓಡುತ್ತಾರೆ. ಶಾಲಾಬಾಲಕನ ಕೈಹಿಡಿದು ಆತನ ತಂದೆ ರೈಲಿಗೆ ಹತ್ತುವ ತರಾತುರಿಯಲ್ಲಿರುವಾಗ ಮಿರಿಮಿಂಚುವ, ಜತನದಿಂದ ಕಾಪಾಡಿದ ಬಲಗಾಲಿನ ಬೂಟು ಹುಡುಗನ ಕಾಲಿಂದ ಕಳಚಿ ಬೀಳುತ್ತದೆ. ಅದನ್ನು ಹೆಕ್ಕಲು ಇನ್ನೇನು ಬಾಗಬೇಕೆನ್ನುವಷ್ಟರಲ್ಲಿ ರೈಲಿನ ಗಂಟೆ ಬಾರಿಸುತ್ತದೆ. ಹುಡುಗ ಬೂಟು ಬಿಟ್ಟು ರೈಲು ಹತ್ತುತ್ತಾನೆ. ರೈಲುಗಾಡಿಯ ಬಾಗಿಲಿನಲ್ಲಿ ನಿಂತು ನಿರಾಶೆಯಿಂದ ಕಳಚಿ ಬಿದ್ದ ತನ್ನ ಬೂಟನ್ನು ನೋಡುತ್ತಿರುತ್ತಾನೆ. ಫ್ಲ್ಯಾಟ್ ಫಾರಂನ ಮೂಲೆಯೊಂದರಲ್ಲಿ ಕೂತ ಬಡಬಾಲಕ ಇದನ್ನೆಲ್ಲಾ ನೋಡುತ್ತಿರುತ್ತಾನೆ. ಕೂಡಲೇ ಎದ್ದು ಕಳಚಿ ಬಿದ್ದ ಶಾಲಾಬಾಲಕನ ಬೂಟನ್ನು ಎತ್ತಿ ಆತನಿಗೆ ನೀಡಲು ಫ್ಲ್ಯಾಟ್ ಫಾರಂ ಮೇಲೆ ಓಡುತ್ತಾನೆ. ಇನ್ನೇನು ಆತನ ಕೈಗೆ ಬೂಟನ್ನು ನೀಡಬೇಕೆನ್ನುವಷ್ಟರಲ್ಲಿ ರೈಲು ನಿಲ್ದಾಣ ಬಿಡುತ್ತದೆ. ಹುಡುಗ ಬೂಟಿನ ವಾರಸುದಾರ ಬಾಲಕನಿರುವ ಗಾಡಿಯತ್ತ ಬೂಟನ್ನು ಎಸೆಯುತ್ತಾನೆ. ಆದರೆ ಅದು ಆತನಿಗೆ ಸಿಗದೇ ಅಥವಾ ಗಾಡಿಯೊಳಗೂ ಬೀಳದೇ ಫ್ಲ್ಯಾಟ್ ಫಾರಂ ಮೇಲೆ ಬೀಳುತ್ತದೆ. ಬಡಬಾಲಕನಿಗೂ ನಿರಾಶೆ, ಬೂಟಿನ ವಾರಸುದಾರನಿಗೂ ನಿರಾಶೆ. ಆತನಿಗೆ ತಲುಪಿಸಲಾಗಲಿಲ್ಲ ಎಂಬ ಹತಾಶೆಯಿಂದ ಕಾಲನ್ನು ನೆಲಕ್ಕೆ ಬಡಿಯುತ್ತಾನೆ.

ರೈಲಿನ ಬಾಗಿಲಲ್ಲಿದ್ದ ಬಾಲಕ ಒಂಟಿ ಬೂಟು ತನಗಂತೂ ಪ್ರಯೋಜನಕ್ಕೆ ಬಾರದು ಎಂದು ತನ್ನ ಕಾಲಲ್ಲಿದ್ದ ಇನ್ನೊಂದು ಬೂಟನ್ನು ಕಳಚಿ ಬಡಬಾಲಕನತ್ತ ಎಸೆಯುತ್ತಾನೆ. ಬಡಬಾಲಕ ಅದನ್ನು ಎತ್ತಿ ಕೈಯಲ್ಲಿ ಹಿಡಿದಾಗ ಆತನ ಮುಖದಲ್ಲಿ ನಿರಾಶೆ, ಆಸೆ, ಕೃತಜ್ಞತಾ ಭಾವ, ಸಂತಸ ಏಕಕಾಲಕ್ಕೆ ಮೂಡುತ್ತದೆ. ಬಡಬಾಲಕನ ಪ್ರಯತ್ನಕ್ಕೆ ಮನಸೋತ ಬೂಟಿನ ವಾರಸುದಾರ ಪ್ರೀತಿತುಂಬಿದ ಸಂತುಷ್ಟ ಭಾವದಿಂದ ಬಡಬಾಲಕನತ್ತ ಕೈಬೀಸಿದರೆ ಬಡಬಾಲಕ ಕೃತಜ್ಞತಾ ಭಾವದಿಂದ ಆತನಿಗೆ ಕೈ ಬೀಸುತ್ತಾನೆ.

ದೊಡ್ಡವರು ಅಸೂಯೆಪಡುತ್ತಾರೆ. ಮಕ್ಕಳು ಆಸೆ ಪಡುತ್ತಾರೆ. ಆದಾಗ್ಯೂ ತನಗಿಲ್ಲದ್ದು ಇತರರಿಗಿರಬಾರದೆಂಬ ಅಸೂಯೆ ಮಕ್ಕಳಲ್ಲಿರುವುದಿಲ್ಲ. ತನಗೆ ಪ್ರಯೋಜನಕ್ಕೆ ಬಾರದ್ದು ಆತನಿಗಾದರೂ ಪ್ರಯೋಜನಕ್ಕೆ ಬರಲಿ ಎಂಬ ಮಕ್ಕಳ ನಿಷ್ಕಲ್ಮಶ ನಿಸ್ವಾರ್ಥ ಮನಸ್ಸನ್ನು ಈ ಚಿತ್ರ ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಇದು ಚಿತ್ರದ ಮೇಲ್ಮೈಯ ಸಂದೇಶವಾದರೆ, ಒಟ್ಟಂದದ ಸಂದೇಶ ಬಹಳ ಹಿರಿದು. ನಾಲ್ಕೂವರೆ ನಿಮಿಷಗಳ ಈ ಕಿರುಚಿತ್ರ ನೋಡುಗನ ಒಳಗಣ್ಣು ತೆರೆಸಬಲ್ಲುದು, ಮನಸ್ಸಿನ ಅಂತರಾಳಕ್ಕೆ ನಾಟಬಲ್ಲುದು.

ಇಪ್ಪತ್ತರ ಹರೆಯ ಎಂದರೆ ಇನ್ನೂ ಜಗತ್ತನ್ನು ಬೆರಗುಗಣ್ಣಲ್ಲಿ ನೋಡುವ ವಯಸ್ಸು. ನಿರ್ಮಾಪಕಿ ಸಾರಾ ಕಿರಿಪ್ರಾಯದಲ್ಲೇ ಸಂತತ್ವವನ್ನು ಪಡೆದುಕೊಂಡಿದ್ದಾಳೆ. ಆಕೆಯ ಸಂತ ಮನಸ್ಸು ಮತ್ತು ಜೀವನಾನುಭವ ಆಕೆಯಿಂದ ಇಂತಹ ಚಿತ್ರ ನಿರ್ಮಿಸಿರಬಹುದು. ಇದು ಆಸ್ಕರ್ ಪ್ರಶಸ್ತಿಗೂ ಅರ್ಹವಾದ ಚಿತ್ರ ಎಂಬುದು ನನ್ನ ಅನಿಸಿಕೆ.

ಬಡಬಾಲಕನ ನಟನೆಯಂತೂ ಅತ್ಯದ್ಭುತವಾಗಿದೆ. ಎಲ್ಲೂ ಕೃತಕತೆ ಕಾಣಸಿಗುವುದಿಲ್ಲ. ಆತ ನಿರಾಶೆ, ಹತಾಶೆ, ಆಸೆ, ನೋವು, ಸಂತಸ ಎಲ್ಲವನ್ನೂ ಸ್ವಾಭಾವಿಕವಾಗಿ ಹೊರಹೊಮ್ಮಿಸಿದ್ದಾನೆ. ಅಸೂಯೆ, ದ್ವೇಷ ತುಂಬಿದ ಜಗತ್ತಿಗೆ ಮಕ್ಕಳ ನಿಷ್ಕಲ್ಮಶ ಮುಗ್ಧ ಮನಸ್ಸುಗಳ ಮೂಲಕ ನಿರ್ಮಾಪಕಿ ಸಾರಾ ಉದಾತ್ತ ಸಂದೇಶ ನೀಡಿದ್ದಾರೆ.

ಚಿತ್ರದ ಕೊನೆಯಲ್ಲಿ ಪರದೆಯ ಮೇಲೆ ಮೂಡುವ ("Based on a situation of Gandhi's life") ಎಂಬ ಬರಹ ಭಾರತೀಯನಾದ ನನ್ನಲ್ಲಿ ಪುಳಕ ಹುಟ್ಟಿಸಿತು. ಗಾಂಧಿಯ ಹೋರಾಟದ ಬದುಕು ಪ್ರಾರಂಭವಾಗುವುದೂ ರೈಲಿನ ಮೂಲಕ. ರೈಲಿನಿಂದ ವರ್ಣಭೇದದ ಕಾರಣಕ್ಕೆ ಹೊರತಳ್ಳಲ್ಪಡದಿದ್ದರೆ ಗಾಂಧಿ ಎಂಬ ಹೋರಾಟಗಾರ ಹುಟ್ಟುತ್ತಿರಲಿಲ್ಲ. ಗಾಂಧಿಯ ಬದುಕಿನ ಘಟನೆಯೊಂದರ ಆಧಾರಿತ ಎನ್ನಬೇಕಾದರೆ ಆಕೆ ಖಂಡಿತವಾಗಿಯೂ ಗಾಂಧಿಯನ್ನು ಓದಿರುತ್ತಾಳೆ. ಗಾಂಧಿಯ ಬಗ್ಗೆ ಇಂದಿಗೂ ಜಗತ್ತು ಹೆಮ್ಮೆಪಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಗಾಂಧಿಯ ಮೇಲೆ ಆತನ ದೇಶದಲ್ಲಿ ಅಸಹನೆ ಮತ್ತು ದ್ವೇಷ ತುಂಬಿರುವಾಗ ಜಗತ್ತು ಆತನನ್ನು ಆಧರಿಸುತ್ತಿದೆ. ಇಲ್ಲಿ ಗಾಂಧಿ ಹಂತಕನನ್ನು ಪೂಜಿಸಲಾಗುತ್ತದೆ ಎಂಬ ಸತ್ಯ ತಿಳಿದರೆ ಜಗತ್ತು ಭಾರತವನ್ನು ದ್ವೇಷಿಸಲು ಬೇರೆ ಕಾರಣ ಬೇಕಾಗದು.

ಒಟ್ಟಿನಲ್ಲಿ ನಿರ್ಮಾಪಕಿ ಸಂತತ್ವಕ್ಕೆ, ಸಾತ್ವಿಕತೆಗೆ, ನಿಷ್ಕಲ್ಮಶತೆಗೆ ಒಂದು ನಿದರ್ಶನವಾಗಿ, ರೂಪಕವಾಗಿ ಗಾಂಧಿಯನ್ನು ಎತ್ತಿಕೊಂಡಿರುವುದು ನಮಗಂತೂ ಹೆಮ್ಮೆಯ ವಿಚಾರ.

share
ಇಸ್ಮತ್ ಪಜೀರ್
ಇಸ್ಮತ್ ಪಜೀರ್
Next Story
X