ಬಜಾಲ್‌ನಲ್ಲಿ ಮದ್ರಸ ಸಮ್ಮೇಳನ

ಮಂಗಳೂರು, ಫೆ.10: ಬಜಾಲ್ ನಂತೂರಿನ ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಮ್ ಹೈಯರ್ ಸೆಕಂಡರಿ ಮದ್ರಸದಲ್ಲಿ ಮದ್ರಸ ಸಮ್ಮೇಳನವು ‘ಧರ್ಮ ಅಳಿಯದೆ ಜಗತ್ತು ಉಳಿಯಲಿ’ ಎಂಬ ಘೋಷಣೆಯೊಂದಿಗೆ ನಡೆಯಿತು.
ಜಮಾಅತ್ ಅಧ್ಯಕ್ಷ ಬಿ.ಎನ್.ಅಬ್ಬಾಸ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದರ್ ಉಸ್ತಾದ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಉದ್ಘಾಟಿಸಿದರು. ಮುದರ್ರಿಸ್ ಇಲ್ಯಾಸ್ ಅಂಜದಿ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್, ಕೋಶಾಧಿಕಾರಿ ಅಬ್ದುಸ್ಸಲಾಂ, ಬಿ. ಫಕ್ರುದ್ದೀನ್, ಕುತುಬಿಯ್ಯತ್ ಕಮಿಟಿಯ ಅಧ್ಯಕ್ಷ ಕೆ.ಇ. ಅಶ್ರಫ್, ಅಧ್ಯಾಪಕ ಅಬೂಬಕರ್ ಸಖಾಫಿ, ಮುಹಮ್ಮದ್ ಶರೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ಅಬ್ದುಲ್ ಹಕೀಂ ಮದನಿ ವಂದಿಸಿದರು.
Next Story





