ಶತಕದ ಮೂಲಕ ಹೊಸ ದಾಖಲೆ ಬರೆದ ಶಿಖರ್ ಧವನ್
ಈ ಸಾಧನೆ ಮಾಡಿದ ಮೊದಲ ಭಾರತೀಯ

ಹೊಸದಿಲ್ಲಿ, ಫೆ.10: ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ 109 ರನ್ ಸಿಡಿಸಿದ್ದಾರೆ. ಧವನ್ ರ 100ನೆ ಪಂದ್ಯ ಇದಾಗಿದ್ದು, ಶತಕದ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರನಾಗಿ ಹೊಸ ದಾಖಲೆ ಬರೆದಿದ್ದಾರೆ.
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಧವನ್, 100ನೆ ಪಂದ್ಯದಲ್ಲಿ 99 ಬಾಲ್ ಗಳಲ್ಲಿ ಶತಕ ಸಿಡಿಸಿದರು. ಇದರಲ್ಲಿ 2 ಸಿಕ್ಸ್ ಗಳು ಹಾಗು 10 ಫೋರ್ ಗಳಿತ್ತು.
ವಿರಾಟ್ ಕೊಹ್ಲಿಯೊಡನೆ 2ನೆ ವಿಕೆಟ್ ಗೆ ಜೊತೆಯಾದ ಧವನ್ 158 ರನ್ ಗಳ ಜೊತೆಯಾಟ ನೀಡಿದರು. 75ರನ್ ಗಳಿಸಿದ್ದಾಗ ಕೊಹ್ಲಿ ಔಟಾದರು,. ಈ ಸಾಧನೆಯ ಮೂಲಕ ಧವನ್ ಸೌರವ್ ಗಂಗೂಲಿಯವರ ಸಾಧನೆಯನ್ನು ಹಿಂದಿಕ್ಕಿದ್ದಾರೆ. 1999ರ ವಿಶ್ವಕಪ್ ನಲ್ಲಿ 100 ನೆ ಪಂದ್ಯವಾಡಿದ್ದ ಗಂಗೂಲಿ 97 ರನ್ ಗಳಿಸಿದ್ದರು.
Next Story





