ಡಾ.ಎಂ.ಮೋಹನ ಆಳ್ವರಿಗೆ ತಿಂಗಳೆ ಪ್ರಶಸ್ತಿ

ಉಡುಪಿ, ಫೆ.10: ನಾಡಿನ ಹಿರಿಯ ಸಾಂಸ್ಕೃತಿಕ ಸೇನಾನಿ, ಅಗ್ರಗಣ್ಯ ಸಂಘಟಕ ಹಾಗೂ ಕಲಾ-ಸಾಹಿತ್ಯ ಪೋಷಕ ಡಾ.ಎಂ ಮೋಹನ ಆಳ್ವ ಅವರನ್ನು 2018ನೇ ಸಾಲಿನ ‘ತಿಂಗಳೆ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ತಿಂಗಳೆಯ ಇತಿಹಾಸ ಪ್ರಸಿದ್ಧ ನೇಮೋತ್ಸವದ ಸಂದರ್ಭದಲ್ಲಿ ದಿ.ರವೀಂದ್ರ ಹೆಗ್ಡೆ ಇವರಿಂದ ಪ್ರಾರಂಭಿಸಲ್ಪಟ್ಟು ಕಳೆದ 56 ವರ್ಷ ಗಳಿಂದ ನಡೆದುಕೊಂಡು ಬಂದಿರುವ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಮಾ. 8ರಂದು ಡಾ.ಮೋಹನ ಆಳ್ವರಿಗೆ ತಿಂಗಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೆಗ್ಡೆ ಮಾಹಿತಿ ನೀಡಿದ್ದಾರೆ.
Next Story





