ಮಂಗಳೂರು: ಮಹಿಳಾ ಶರೀಅತ್ ಕಾಲೇಜು ದಾಖಲಾತಿ ಫಾರಂ ಬಿಡುಗಡೆ

ಮಂಗಳೂರು, ಫೆ. 10: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕಿಸ) ಸಾರಥ್ಯದಲ್ಲಿ ಎ. 25ರಂದು ಉದ್ಘಾಟನೆಗೊಳ್ಳಲಿರುವ ದಾರುಲ್ ಖುರ್‌ಆನ್ ಕಿಸಾ ಮಹಿಳಾ ಶರೀಅತ್ ಕಾಲೇಜಿನ ದಾಖಲಾತಿ ಫಾರಂ ಶನಿವಾರ ಕಚೇರಿಯಲ್ಲಿ ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಕಾರ್ಯದರ್ಶಿ ಶೈಖುನಾ ಹಾಜಿ ಎಂ. ಎ. ಖಾಸಿಂ ಉಸ್ತಾದ್ ಕುಂಬಳೆ ಅವರು ಹಾಜಿ ಇಸ್ಮಾಯೀಲ್ ಇಬ್ರಾಹೀಂ ಕಡವಾಲ ಮೂಡುಬಿದಿರೆ ಅವರಿಗೆ ದಾಖಲಾತಿ ಫಾರಂ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಎಸ್‌ವೈಎಸ್ ದ.ಕ. ಜಿಲ್ಲಾ ಅಧ್ಯಕ್ಷ ಬಂಬ್ರಾಣ ಉಸ್ತಾದ್, ಫೈಝೀಸ್ ದ.ಕ. ಪ್ರಧಾನ ಕಾರ್ಯದರ್ಶಿ ಶರೀಫ್ ಫೈಝಿ ಕಡಬ, ಸುನ್ನೀ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ. ಎಸ್. ಹೈದರ್ ದಾರಿಮಿ, ದ.ಕ. ಜಿಲ್ಲಾ ಜಮೀಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಕೆ. ಎಲ್. ಉಮರ್ ದಾರಿಮಿ, ಸಮಸ್ತ ಕರ್ನಾಟಕ ಮುಶಾವರ ಸದಸ್ಯ ಯು. ಕೆ. ಇಸ್ಮಾಯೀಲ್ ಫೈಝಿ ಕಲ್ಲಡ್ಕ, ಉಮರ್ ದಾರಿಮಿ ಸಾಲ್ಮರ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಎ. ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಉಪಾಧ್ಯಕ್ಷ ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಎಸ್ಕೆಎಸೆಸೆಫ್ ಜಿಲ್ಲಾ ಸದಸ್ಯ ಹಾಜಿ ಅಬ್ದುಲ್ಲ ಬೆಳ್ಮ ಮೊದಲಾದವರು ಉಪಸ್ಥಿತರಿದ್ದರು.
ಮುಸ್ತಫ ಫೈಝಿ ಕಿನ್ಯ ಸ್ವಾಗತಿಸಿ, ಸಿದ್ಧೀಕ್ ಫೈಝಿ ಕರಾಯ ವಂದಿಸಿದರು.





